Kannada NewsKarnataka NewsLatestPolitics

*ತೀವ್ರ ಕುತೂಹಲ ಮೂಡಿಸಿದ ಸುಮಲತಾ ನಡೆ: ಮಂಡ್ಯದಲ್ಲಿಯೇ ನನ್ನ ನಿರ್ಧಾರ ತಿಳಿಸುತ್ತೇನೆ ಎಂದ ಸಂಸದೆ*

ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆಗೆ ಮಂಡ್ಯ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ ಮುಂದಿನ ತಮ್ಮ ರಾಜಕೀಯ ನಡೆ ಬಗ್ಗೆ ಚರ್ಚಿಸಲು ಇಂದು ಸಂಸದೆ ಸುಮಲತಾ ಮಂಡ್ಯದಲ್ಲಿ ಬೆಂಬಲಿಗರ ಸಭೆ ಕರೆದಿದ್ದಾರೆ. ಸುಮಲತಾ ಮುಂದಿನ ನಡೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಈ ನಡುವೆ ಮಂಡ್ಯಕ್ಕೆ ತೆರಳುವ ಮುನ್ನ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೆ ಸುಮಲತಾ, ನನ್ನ ಮುಂದಿನ ರಾಜಕೀಯ ನಡೆಯ ನಿರ್ಧಾರವನ್ನು ಮಂಡ್ಯದಲ್ಲಿಯೇ ತಿಳಿಸುತ್ತೇನೆ ಎಂದರು.

Home add -Advt

ಅಂಬರೀಶ್ ಯಾವತ್ತೂ ಅಧಿಕಾರಕ್ಕಾಗಿ ಆಸೆ ಪಟ್ಟವರಲ್ಲ. ನಾನೂ ಅಂಬರೀಶ್ ಅವರನ್ನು ನೋಡಿಕೊಂಡು ಬದಿದ್ದೇನೆ. ಇಂದು ನಟ ದರ್ಶನ್, ಅಭಿಷೇಕ್ ಮಂಡ್ಯಕ್ಕೆ ಬರ್ತಿದ್ದಾರೆ. ಮಂಡ್ಯದಲ್ಲಿಯೇ ನನ್ನ ನಿರ್ಧಾರ ಘೋಷಿಸುತ್ತೇನೆ ಎಂದು ಹೇಳಿದರು.

ಇದೇ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಕಿಡಿಕಾರಿದ ಸುಮಲತಾ ಯಾರು ಕುಂಬಳ ಕಾಯಿ ಕಳ್ಳ ಎಂಬುದು ದೇಶಕ್ಕೆ ಗೊತ್ತಿದೆ. ನನ್ನ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ. ನನಗೂ ಅವರ ಅವಶ್ಯಕತೆ ಇಲ್ಲ ಎಂದು ಹೇಳಿದರು.

Related Articles

Back to top button