Kannada NewsKarnataka News
ಲಲಿತಾ ಆರಾಧನಾ ಮಂಡಳಿಯಿಂದ ಕುಂಕುಮಾರ್ಚನೆ

ಲಲಿತಾ ಆರಾಧನಾ ಮಂಡಳಿಯಿಂದ ಕುಂಕುಮಾರ್ಚನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಹನುಮಾನ್ ನಗರದ ಲಲಿತಾ ಆರಾಧನಾ ಮಂಡಳಿ ವತಿಯಿಂದ ಮಂಗಳವಾರ ಕುಂಕುಮಾರ್ಚನೆ ಕಾರ್ಯಕ್ರಮ ನಡೆಯಿತು.
ಕಳೆದ 15 ವರ್ಷದಿಂದಲೂ ಲಲಿತಾ ಆರಾಧನಾ ಮಂಡಳಿ ಕುಂಕುಮಾರ್ಚನೆ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ಈ ಬಾರಿ ಸುಮಾರು 60 ಮಹಿಳೆಯರು ಭಾಗವಹಿಸಿದ್ದರು.
ವೇದಮೂರ್ತಿ ರಾಮಚಂದ್ರ ಭಟ್ ಪೌರೋಹಿತ್ಯದಲ್ಲಿ ಕಾರ್ಯಕ್ರಮ ನಡೆಯಿತು. ಸಂಧ್ಯಾ ಭಟ್ ಕಾರ್ಯಕ್ರಮ ಆಯೋಜಿಸಿದ್ದರು. ಭಾವನಾ ಕುಲಕರ್ಣಿ, ಮಾಲಾ ಹೊಸಪೇಟ್, ಸಾವಿತ್ರಿ ಪಾಟೀಲ್, ಸೀಮಾ ಬಾಗಲಕೋಟೆ, ಸುನೀತಾ ಮಾನ್, ದೀಪಾ ದೇಶಪಾಂಡೆ ಮೊದಲಾದವರು ಸಂಘಟನೆಯ ನೇತೃತ್ವ ವಹಿಸಿದ್ದರು.



