Kannada NewsKarnataka News
*ಹುಬ್ಬಳ್ಳಿ-ಧಾರವಾಡ ಡಿಸಿಪಿಯಾಗಿ ಖುಷಾಲ್ ಚೌಕ್ಷೆ ನೇಮಕ*

ಪ್ರಗತಿವಾಹಿನಿ ಸುದ್ದಿ: ಅಂಜಲಿ ಅಂಬಿಗೇರ ಕೊಲೆಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ.ರಾಜೀವ್ ಅಮಾನತು ಆಗಿದ್ದರಿಂದ ಖಾಲಿಯಾದ ಸ್ಥಳಕ್ಕೆ ಬೆಂಗಳೂರಿನ ಫಾರೆನಿಕ್ಸ್ ಲ್ಯಾಬ್ ವಿಭಾಗದ ಜಂಟಿ ನಿರ್ದೇಶಕ ಡಿಸಿಪಿಯಾಗಿ ಖುಷಾಲ್ ಚೌಕ್ಷೆ ಅವರನ್ನ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ನೇಹಾ ಹೀರೆಮಠ ಕೊಲೆ ಪ್ರಕರಣ ಹಾಗೂ ಅಂಜಲಿ ಅಂಬಿಗೇರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ.ರಾಜೀವ್ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವೈಫಲ್ಯ ಹಿನ್ನೆಲೆಯಲ್ಲಿ ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು.




