National

ಐಟಿ‌ ಅಧಿಕಾರಿಗಳ ಮೆಘಾ ರೇಡ್; ದಾಳಿ ವೇಳೆ ಅಧಿಕಾರಿಗಳಿಗೆ ಶಾಕ್

ಪ್ರಗತಿವಾಹಿನಿ ಸುದ್ದಿ: ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ  ಇಂದು ಬೆಳ್ಳಂಬೆಳಗ್ಗೆ ಮೇಘಾ ರೇಡ್ ಮಾಡಿದ್ದು, ರೇಡ್ ವೇಳೆ ಅಧಿಕಾರಿಗಳೆ ದಂಗಾಗಿರುವ ಘಟನೆ ನಡೆದಿದೆ.‌

ಆದಾಯ ತೆರಿಗೆ ಇಲಾಖೆಯ ತಂಡವು ನಾಸಿಕ್‌ನ ಕೆನಡಾ ಕಾರ್ನರ್ ಪ್ರದೇಶದ ಸುರಾನಾ ಜ್ಯುವೆಲರ್ಸ್, ಮಾಲೀಕರ ನಿವಾಸ ಮತ್ತು ಅವರ ನಿರ್ಮಾಣ ಸಂಸ್ಥೆಯಾದ ಮಹಾಲಕ್ಷ್ಮಿ ಬಿಲ್ಡರ್ಸ್ ಸೇರಿದಂತೆ ಅನೇಕ ಸ್ಥಳಗಳನ್ನು ಗುರಿಯಾಗಿಸಿ ದಾಳಿಯ ಮಾಡಿದೆ.

ದಾಳಿ ವೇಳೆ ಸುಮಾರು 26 ಕೋಟಿ ನಗದು ಮತ್ತು 90 ಕೋಟಿ ಮೌಲ್ಯದ ಲೆಕ್ಕಕ್ಕೆ ಸಿಗದ ಸಂಪತ್ತಿನ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಧಿಕಾರಿಗಳು ಬಂಗಲೆಯಲ್ಲಿದ್ದ ಪೀಠೋಪಕರಣಗಳನ್ನು ಒಡೆದು ಅಡಗಿಸಿಟ್ಟ ಹಣವನ್ನು ಪತ್ತೆ ಹಚ್ಚಿದ್ದಾರೆ. ನಾಸಿಕ್, ನಾಗುರ ಮತ್ತು ಜಲಗಾಂವ್‌ನಿಂದ ಸುಮಾರು ಐವತ್ತು ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಹಠಾತ್ ದಾಳಿಯು ತೆರಿಗೆ ವಂಚನೆಯ ಶಂಕಿತ ಇತರ ಉದ್ಯಮಿಗಳಲ್ಲಿ ಭೀತಿಯನ್ನು ಉಂಟುಮಾಡಿದೆ. 

ಈ ದಾಳಿ ಬೆಳಗ್ಗೆಯೇ ಪ್ರಾರಂಭವಾಗಿದ್ದು, ತಂಡಗಳು ದಿನವಿಡೀ ಹಣಕಾಸಿನ ದಾಖಲೆಗಳು, ವಹಿವಾಟಿನ ಡೇಟಾ ಮತ್ತು ಸಂಬಂಧಿತ ದಾಖಲಾತಿಗಳನ್ನು ಪರಿಶೀಲಿಸುತ್ತಿವೆ. ಶಾಂತಿ  ಸುವ್ಯವಸ್ಥೆ ಕಾಪಾಡಲು ದಾಳಿ ನಡೆದ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದರು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button