Kannada NewsKarnataka NewsNationalPolitics

*ರೇಣುಕಾಸ್ವಾಮಿ ಕೊಲೆ ಕೇಸ್: ಪವಿತ್ರಾ ಗೌಡ ಮ್ಯಾನೇಜರ್‌ ಅಂದರ್ *

ಪ್ರಗತಿವಾಹಿನಿ ಸುದ್ದಿ: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 16 ಜನ ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿರುವ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ನನ್ನು ಬಂಧಿಸಿದ್ದಾರೆ. ಈ ಮೂಲಕ ಆರೋಪಿಗಳ ಸಂಖ್ಯೆ 17ಕ್ಕೆ ಏರಿಕೆ ಆಗಿದೆ.‌

Home add -Advt

ಕೊಲೆಯಾದ ದಿನ ರೇಣುಕಾಸ್ವಾಮಿ ತಪ್ಪಾಯ್ತು ಮೇಡಂ ಎಂದು ಕೈ-ಕಾಲು ಮುಗಿದರೂ ಕೇಳದ ಪವಿತ್ರಾಗೌಡ, ರೇಣುಕಾಸ್ವಾಮಿಗೆ ಚಪ್ಪಲಿಯಲ್ಲಿ ಹೊಡೆದಿದ್ದರು. ಬಳಿಕ ಮೈಸೂರಿನ ಮನೆಗೆ ತೆರಳಿದ್ದರು ಎನ್ನಲಾಗಿದೆ. ಆ ವೇಳೆ ಅವರ ಮ್ಯಾನೇಜರ್ ಸ್ಥಳದಲ್ಲೇ ಪವಿತ್ರಾಗೌಡ ಅವರ ಜೊತೆ ಇದ್ದ ಎನ್ನಲಾಗಿದೆ.‌

ರೇಣುಕಾಸ್ವಾಮಿ ಕೋಲೆ ಕೇಸ್ ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ, ಯಾರ ಒತ್ತಡಕ್ಕೂ ಮಣಿಯದೆ ತನಿಖೆ ನಡೆಸುತ್ತಿದ್ದಾರೆ.‌ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಮಧ್ಯರಾತ್ರಿ ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ. 

ಬಂಧಿತ ಆರೋಪಿಯನ್ನು ಪ್ರಕರಣದ A1 ಆರೋಪಿ ಪವಿತ್ರಾಗೌಡ ಅವರ ಮ್ಯಾನೇಜರ್ ದೇವರಾಜು ಎನ್ನಲಾಗಿದೆ. ರೇಣುಕಾಸ್ವಾಮಿ ಮೇಲೆ ಪವಿತ್ರಾಗೌಡ ಹಲ್ಲೆ ಮಾಡಲು ಹೋಗಿದ್ದ ವೇಳೆ ಈತ ಕೂಡ ಆಕೆಯ ಜೊತೆಯಲ್ಲಿ ಹೋಗಿದ್ದ ಎಂಬ ಮಾಹಿತಿ ಮೇರೆಗೆ ವಶಕ್ಕೆ ಪಡೆಯಲಾಗಿದೆ.

ಇಂದು ಪೊಲೀಸರು ಪವಿತ್ರಾಗೌಡ ಅವರ ಮನೆಯ ತಪಾಸಣೆ ಮಾಡಲಿದ್ದು, ಅಂದು ಆಕೆ ಧರಿಸಿದ್ದ ಬಟ್ಟೆ ಮತ್ತು ಚಪ್ಪಲಿಯನ್ನೂ ವಶಕ್ಕೆ ಪಡೆಯಲಿದ್ದಾರೆ. ಇವು ಪ್ರಕರಣಕ್ಕೆ ಪ್ರಮುಖ ಸಾಕ್ಷ್ಯಗಳಾಗಲಿವೆ ಎಂದು ಪೊಲೀಸ್ ಮೂಲಗಳು ಹೇಳುತ್ತಿವೆ.

Related Articles

Back to top button