Latest

*ಮೀನು ಹಿಡಿಯಲು ಹೋದಾಗ ದುರಂತ: ಕೆರೆಯಲ್ಲಿ ವಿದ್ಯುತ್ ಪ್ರವಹಿಸಿ ಇಬ್ಬರು ಬಾಲಕರು ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ಮೀನು ಹಿಡಿಯಲೆಂದು ಕೆರೆಗೆ ಇಳಿದಿದ್ದ ಬಾಲಕರಿಬ್ಬರು ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿರುವ ದಾರುಣ ಘಟನೆ ವಿಜಯಪುರ ಜಿಲ್ಲೆಯ ದ್ಯಾಬೇರಿ ಕೆರೆಯಲ್ಲಿ ಸಂಭವಿಸಿದೆ.

Home add -Advt

ವಿದ್ಯುತ್ ತಂತಿ ತುಂಡಾಗಿ ಕೆರೆಗೆಯಲ್ಲಿ ಬಿದ್ದಿತ್ತು. ಗೊತ್ತಾಗದೇ ಬಾಲಕರಿಬ್ಬರು ಮೀನು ಹಿಡಿಯಲು ಅದೇ ಕೆರೆಗೆ ಹೋಗಿದ್ದಾರೆ. ಕೆರೆ ನೀರಿಗೆ ಕಾಲಿಡುತ್ತಿದ್ದಂತೆ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ್ದಾರೆ.

ರೋಹಿತ್ ಚೌವ್ಹಾಣ್ ಹಾಗೂ ವಿಜಯ್ ಚೌವ್ಹಾಣ್ ಮೃತ ಬಾಲಕರು. ಮಕ್ಕಳನ್ನು ಕಳೆದುಕೊಂಡ ಕುಟುಂಬದ ರೋದನ ಮುಗಿಲು ಮುಟ್ಟಿದೆ.


Related Articles

Back to top button