Belagavi NewsBelgaum NewsKannada NewsKarnataka News

*ಕಾರು ಅಡ್ಡಗಟ್ಟಿ 10 ಲಕ್ಷ ದರೋಡೆ ಮಾಡಿ ಪರಾರಿಯಾದ ದುಷ್ಕರ್ಮಿಗಳು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಕಡೆಯಿಂದ ಶಿವಮೊಗ್ಗ ಕಡೆಗೆ ಹೊರಟಿದ್ದ ಕಾರು ಅಡ್ಡಗಟ್ಟಿ ಹತ್ತು ಲಕ್ಷ ರೂಪಾಯಿ ಹಣವನ್ನು ದರೋಡೆ ಮಾಡಿಕೊಂಡು ಪರಾರಿಯಾದ ಘಟನೆ ಕಿತ್ತೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸ್ಟೀಲ್‌ ಮತ್ತು ಸಿಮೆಂಟ್ ಅಂಗಡಿಯ ಮಾಲೀಕ ಬೆಳಗಾವಿಯ ಶಾಸ್ತ್ರಿ ನಗರದ ನಿವಾಸಿ ಅಮಿತ್ ಅಶೋಕ್‌ ಪೇರಿವಾಲ ಶಿವಮೊಗ್ಗದಲ್ಲಿರುವ ತಮ್ಮ ಗೆಳೆಯನಿಗೆ 10 ಲಕ್ಷ ರೂಪಾಯಿ ನೀಡುವುದಿತ್ತು. ತಮ್ಮ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಚಂದನಾಥ ರಾಮೇಶ್ವರ ಸಿದ್‌, ಸುನೀಲ ರಾಜಕುಮಾರ ಪ್ರಜಾಪತ್‌ರನ್ನು ಹಣ ನೀಡಲು ಕಳಿಸಿದ್ದರು.

ಬೆಳಗಾವಿಯಿಂದ ಶಿವಮೊಗ್ಗಕ್ಕೆ ಹೊರಟಾಗ ಕಿತ್ತೂರಿನ ರಾಷ್ಟ್ರೀಯ ಹೆದ್ದಾರಿ ಮೇಲೆ ಇನ್ನೋವಾ ಕಾರಿನಲ್ಲಿ ಬಂದ ನಾಲ್ಕು ಜನ, ಕಾರನ್ನು ಅಡ್ಡಗಟ್ಟಿ 10 ಲಕ್ಷ ರೂಪಾಯಿ ದರೋಡೆ ಮಾಡಿಕೊಂಡು ಪರಾರಿಯಾಗಿದ್ದಾರೆ.

ಈ ಕುರಿತು ಕಿತ್ತೂರು ಪೊಲೀಸ್ ಠಾಣೆಯಲ್ಲಿ ಜುಲೈ 3 ರಂದು ಪ್ರಕರಣ ದಾಖಲಾಗಿದೆ. ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಶೃತಿ ಎನ್ ಎಸ್, ಡಿವೈಎಸ್ಪಿ ರವಿ ನಾಯಕ, ಪಿಎಸ್‌ಐ ಪ್ರವೀಣ ಗಂಗೊಳ್ಳ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ದರೋಡೆಕೋರರಿಗೆ ಬಲೆ ಬೀಸಿದ್ದಾರೆ.

Related Articles

Back to top button