ಗಣೇಶೋತ್ಸವ ಮೆರವಣಿಗೆ ವೇಳೆ ಅವಘಡ -ಯುವಕ ಬಲಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಗಣೇಶೋತ್ಸವ ಮೆರವಣಿಗೆ ಮುಕ್ತಾಯದ ವೇಳೆ ಅವಘಡ ಸಂಭವಿಸಿದೆ. ಮೆರವಣಿಗೆ ವೇಳೆ ನಡೆದ ಅವಘಡಕ್ಕೆ ಯುವಕನೋರ್ವ ಬಲಿಯಾಗಿದ್ದಾನೆ.
ಕಾಮತ ಗಲ್ಲಿ ಗಣೇಶೋತ್ಸವ ಮಂಡಳದ ಕಾರ್ಯಕರ್ತ, ಕಾಮತ್ ಗಲ್ಲಿ ನಿವಾಸಿ ರಾಹುಲ್ ಸಾವಗಾರ್ ಗಣೇಶೋತ್ಸವ ಮೆರವಣಿಗೆ ವೇಳೆ ಅಪಘಾತದಿಂದ ಸಾವಿಗೀಡಾಗಿದ್ದಾರೆ. ಅವರಿಗೆ 38 ವರ್ಷ ವಯಸ್ಸಾಗಿತ್ತು.
ಮೆರವಣಿಗೆ ಕಿರ್ಲೋಸ್ಕರ್ ರಸ್ತೆ ಬಳಿ ಸಾಗುತ್ತಿದ್ದಾಗ ಡಾಲ್ಬಿ ಸರಿಪಡಿಸಲೆಂದು ರಾಹುಲ್ ಪ್ರಯತ್ನಿಸುತ್ತಿದ್ದರು. ಆ ವೇಳೆ ವಾಹನ ಆಕಸ್ಮಿಕವಾಗಿ ರಾಹುಲ್ ಮೇಲೆ ಏರಿದೆ. ಇದರಿಂದ ತೀವ್ರ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅವರು ಬದುಕುಳಿಯಲಿಲ್ಲ.
ರಾಹುಲ್ ಗೆ ಪತ್ನಿ ಹಾಗೂ ಇಬ್ಬರು ಚಿಕ್ಕ ಮಕ್ಕಳಿದ್ದಾರೆ. ರಾಹುಲ್ ಸಾವಿಗೆ ಬಿಜೆಪಿ ಮಹಾನಗರ ಪ್ರಧಾನ ಕಾರ್ಯದರ್ಶಿ ಕಿರಣ ಜಾಧವ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಿಸಲು ಪ್ರಯತ್ನಿಸುವುದಾಗಿ ಜಾಧವ್ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.
ಕಳೆದ 11 ದಿನಗಳಿಂದ ನಡೆದ ಗಣೇಶೋತ್ಸವ ಕೊನೆಯಾಗುವ ವೇಳೆಗೆ ಈ ದುರ್ಘಟನೆ ನಡೆದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ