Kannada NewsKarnataka NewsTravel

*ದೀಪಾವಳಿ*: *ವಿಶೇಷ ರೈಲು ಸಂಚಾರ*

ಪ್ರಗತಿವಾಹಿನಿ ಸುದ್ದಿ: ಬೆಳಕಿನ ಹಬ್ಬ ದೀಪಾವಳಿಗೆ ಊರುಗಳಿಗೆ ಹೋಗುವ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಹಾಗೂ ಸಂಚಾರ ದಟ್ಟಣೆ ಕಡಿಮೆ ಮಾಡಲು ವಿಶೇಷ ರೈಲುಗಳು ಸಂಚರಿಸಲಿವೆ.

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು ಕಂಟೋನ್ಮೆಂಟ್ ಮತ್ತು ತಿರುವನಂತಪುರಂ ನಾರ್ತ್ ನಡುವೆ ವಿಶೇಷ ರೈಲು ಬಿಡಲಾಗುತ್ತಿದೆ.

ಬೆಂಗಳೂರು – ತಿರುವನಂತಪುರ ವಿಶೇಷ ರೈಲು ಟೈಮಿಂಗ್ಸ್ – ರೈಲು ಸಂಖ್ಯೆ 06575 ಶುಕ್ರವಾರ ಸಂಜೆ 4.40ಕ್ಕೆ ಬೆಂಗಳೂರು ಕಂಟೋನ್ಮೆಂಟ್‌ನಿಂದ ಹೊರಟು, ಮರುದಿನ ಬೆಳಗ್ಗೆ 10.30ಕ್ಕೆ ತಿರುವನಂತಪುರಂ ನಾರ್ತ್ ತಲುಪಲಿದೆ.

ಹಿಂತಿರುಗುವ ರೈಲು ಸಂಖ್ಯೆ 06576 ಶನಿವಾರ ಮಧ್ಯಾಹ್ನ 12.40ಕ್ಕೆ ತಿರುವನಂತಪುರಂ ನಾರ್ತ್‌ನಿಂದ ಹೊರಟು, ಭಾನುವಾರ ಬೆಳಗ್ಗೆ 6 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ.

ರೈಲು ಸಂಚಾರದಲ್ಲಿ ಬದಲಾವಣೆ ಇರುವುದರಿಂದ ಪ್ರಯಾಣಿಕರು ತಮ್ಮ ಪ್ರಯಾಣ ಆರಂಭಿಸುವ ಮೊದಲು ರೈಲಿನ ವೇಳಾಪಟ್ಟಿ ಮತ್ತು ಸಂಚಾರ ಸ್ಥಿತಿಯನ್ನು ಪರಿಶೀಲಿಸಿಕೊಳ್ಳುವುದು ಸೂಕ್ತ ಎಂದು ರೈಲ್ವೆ ಇಲಾಖೆಯ ಪ್ರಕಟಣೆ ತಿಳಿಸಿದೆ.


Related Articles

Back to top button