Belagavi NewsBelgaum NewsKannada NewsKarnataka NewsLatest

*ಕಿಡ್ನಾಪ್ ಪ್ರಕರಣ: ಬೆಳಗಾವಿಯಲ್ಲಿ ಬಿಜೆಪಿ ಪ್ರತಿಭಟನೆ*

ಪ್ರಗತಿವಾಹಿನಿ ಸಿದ್ದಿ, ಬೆಳಗಾವಿ : ಕಿತ್ತೂರಿನಲ್ಲಿ ಬಿಜೆಪಿ ಪಟ್ಟಣ ಪಂಚಾಯತಿ ಸದಸ್ಯನ ಕಿಡ್ನಾಪ್ ‌ಪ್ರಕರಣದಲ್ಲಿ ಸ್ಥಳೀಯ ಶಾಸಕ ಬಾಬಾಸಾಹೇಬ್ ಪಾಟೀಲ್ ಕೈವಾಡವಿದ್ದು ಅವರ ಮೇಲೆ ಕ್ರಮ ಕೈಗೊಂಡು ಚುನಾವಣೆಯನ್ನು ಮುಂದಕ್ಕೆ ಹಾಕಬೇಕೆಂದು ಆಗ್ರಹಿಸಿ ಶುಕ್ರವಾರ ಬೆಳಗಾವಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು.

ಪ್ರಕರಣದಲ್ಲಿ ಮುನ್ನೆಲೆಗೆ ಕಿತ್ತೂರು ಶಾಸಕರ ಹೆಸರು ಕೇಳಿ ಬಂದಿದೆ. ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ್ ಮೇಲೆ ಬಿಜೆಪಿ ಜಿಲ್ಲಾಧ್ಯಕ್ಷ ಆರೋಪ ಮಾಡಿದರು. ಶಾಸಕರ ಕುಮ್ಮಕ್ಕಿನಿಂದಲೇ ಬಿಜೆಪಿ ಸದಸ್ಯ ನಾಗರಾಜ್ ಕಿಡ್ನಾಪ್ ಆಗಿದ್ದಾರೆ. ಕೂಡಲೇ ಬಿಜೆಪಿ ಸದಸ್ಯನನ್ನು ಹುಡುಕಿಕೊಡುವಂತೆ  ಮನವಿಯಲ್ಲಿ ತಿಳಿಸಿದರು.

Home add -Advt

ಸೆಪ್ಟಂಬರ್ 3 ರಂದು ನಿಗಧಿಯಾಗಿದ್ದ ಅಧ್ಯಕ್ಷ,‌ -ಉಪಾಧ್ಯಕ್ಷ ಚುನಾವಣೆ ಮುಂದಕ್ಕೆ ಹಾಕಬೇಕು ಎಂದು ಆಗ್ಹಿಸಿದರು. ಕಾಂಗ್ರೇಸ್ ಸರ್ಕಾರ ಮತ್ತು ಕೈ ನಾಯಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಕೂಡಲೇ ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Related Articles

Back to top button