Kannada NewsKarnataka NewsNationalPolitics

*ಟ್ರಕ್ ಮತ್ತು ಟೆಂಪೋ ನಡುವೆ ಅಪಘಾತ: ಎಂಟು ಮಕ್ಕಳು ಸಹಿತ 11 ಜನರ ಸಾವು*

ಪ್ರಗತಿವಾಹಿನಿ ಸುದ್ದಿ : ಟ್ರಕ್ ಮತ್ತು ಟೆಂಪೋ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಎಂಟು ಮಕ್ಕಳು ಸೇರಿದಂತೆ 11 ಜನರು ಸ್ಥಳದಲ್ಲಿಯೇ ಮೃತಪಟ್ಟಿರುವ ಭೀಕರ ದುರಂತ ಸಂಭವಿಸಿದೆ.

ಈ ಭೀಕರ ಘಟನೆ ರಾಜಸ್ಥಾನದ ಧೋಲ್ಪುರ್ ಜಿಲ್ಲೆಯ ಸುನಿಪುರ್ ನಲ್ಲಿ ಇಂದು ಬೆಳಂ ಬೆಳಗ್ಗೆ ಸಂಭವಿಸಿದೆ. ಮೃತರನ್ನು ಸಲ್ಮಾನ್ (8), ಸಾಕಿರ್ (6), ದಾನಿಶ್(10), ಅಜಾನ್(5), ಅಶೀನಾ(10), ಸುಖಿ(7), ಸನೀಫ್ (9) ಇರ್ಫಾನ್ (38), ಝರೀನಾ (35) ಹಾಗೂ ಜೂಲಿ(32) ಎಂದು ಗುರುತಿಸಲಾಗಿದೆ. ಧರ್ಮೇಂದ್ರ, ಸಾಜಿದ್ ಹಾಗೂ ಪ್ರವೀಣ್ ಎಂಬುವವರು ದುರ್ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಟೆಂಪೋದಲ್ಲಿದ್ದ ಜನರು ಬರೌಲಿಯಲ್ಲಿ ನಡೆದ ಕುಟುಂಬದ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಹಿಂದಿರುಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

Home add -Advt

ಈ ಘಟನೆ ನಡೆಸ ತಕ್ಷಕ ಸ್ಥಳಕ್ಕೆ ರಕ್ಷಣಾ ಪಡೆಗಳು ಹಾಗೂ ಪೊಲೀಸ್ ಸಿಬ್ಬಂದಿ ಧಾವಿಸಿದ್ದು, ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಸ್ ಚಾಲಕ ಹಾಗೂ ನಿರ್ವಾಹಕರಿಗೂ ಗಂಭೀರ ಗಾಯಗಳಾಗಿವೆ. ಘಟನೆಯ ಬಗ್ಗೆ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

Related Articles

Back to top button