Film & EntertainmentKannada NewsKarnataka News

*ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕಿದ್ದ ಮತ್ತೋರ್ವ ಆರೋಪಿ ರಾಯಚೂರಿನಲ್ಲಿ ಬಂಧನ*

ಪ್ರಗತಿವಾಹಿನಿ ಸುದ್ದಿ: ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕಿದ್ದ ಆರೊಪಿಯನ್ನು ಇತ್ತೀಚಿಗೆ ಹಾವೇರಿಯಲ್ಲಿ ಬಂಧಿಸಲಾಗಿತ್ತು‌. ಅದರ ಬೆನ್ನಲ್ಲೆ ಮತ್ತೋರ್ವ ಆರೋಪಿಯನ್ನು ರಾಯಚೂರಿನಲ್ಲಿ ಬಂಧಿಸಲಾಗಿದೆ.‌

ಹಾಡಿನ ಮೂಲಕ ಜೀವ ಬೆದರಿಕೆ ಹಾಕಿದ್ದ ಯುವಕನನ್ನು ರಾಯಚೂರಿ ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಯುವಕನನ್ನು ಸೋಹಲ್ ಪಾಶಾ (24) ಎನ್ನಲಾಗಿದೆ. ಸೋಹೆಲ್ ಮಾನ್ವಿ ಪಟ್ಟಣದ ಗ್ಯಾರೇಜ್‌ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದ. ಈತ ಸಲ್ಮಾನ್ ಖಾನ್‌ಗೆ ಹಾಡಿನ ಮೂಲಕ ಬೆದರಿಕೆ ಹಾಕಿದ್ದ ಎನ್ನಲಾಗಿದೆ.

Home add -Advt

ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡ ಮುಂಬೈನ ವರ್ಲಿ ಅಪರಾಧ ವಿಭಾಗದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ವೇಳೆ ಮಾನ್ವಿ ಪಟ್ಟಣದ ಸೋಹಲ್ ಪಾಶಾನನ್ನು ಬೆದರಿಕೆ ಹಾಕಿದ ಆರೋಪದ ಮೇರೆಗೆ ಬಂಧಿಸಿ ಮುಂಬೈಗೆ ಕರೆದೊಯ್ದಿದ್ದಾರೆ.

ವಿಚಾರಣೆ ವೇಳೆ ಸೋಹೆಲ್ ಪಾಶಾ ಹವ್ಯಾಸಿ ಹಾಡುಗಾರನಾಗಿದ್ದು ತನ್ನ ಹಾಡನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲು ಈ ಕೃತ್ಯ ಎಸಗಿದ್ದನು ಎನ್ನಲಾಗಿದೆ. ತನ್ನ ಹೊಸ ಹಾಡು ಮೈ ಸಿಕಂದರ್ ಹೂಂ ಜನಪ್ರಿಯಗೊಳಿಸಲು ಹೀಗೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

Related Articles

Back to top button