Belagavi NewsBelgaum NewsKarnataka News

*ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಅಪ್ಪಾಸಾಹೇಬ ಕುಲಗೋಡೆ ಅಧಿಕಾರ ಸ್ವೀಕಾರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಅಪ್ಪಾಸಾಹೇಬ ಕುಲಗೋಡೆ ಅವರು ಅವಿರೋಧವಾಗಿ ಆಯ್ಕೆ ಆಗಿದ್ದು, ಡಿಸಿಸಿ ಬ್ಯಾಂಕ್ ಸಭಾ ಭವನದಲ್ಲಿ ಅವರು ಅಧಿಕಾರ ವಹಿಸಿಕೊಂಡರು.‌

ಇಂದು ಜಾರಕಿಹೊಳಿ ಸಹೋದರರು ಸಭೆ ಮಾಡಿ ಅಪ್ಪಾಸಾಹೇಬ ಕುಲಗೋಡೆ ಅವರ ಹೆಸರು ಅಂತಿಮಾಡಿದರು. ಬಳಿಕ ನಾಮ ಪತ್ರ ಸಲ್ಲಿಸಿದರು, ನಾಮ ಪತ್ರ ಸ್ವೀಕರಿಸಿದ ಚುನಾವಣಾಧಿಕಾರಿ ಶಿವನಗೌಡಾ ಪಾಟೀಲ್ ಅವರು, ಅದ್ಯಕ್ಷ ಸ್ಥಾನಕ್ಕೆ ಒಂದೆ ಒಂದು ನಾಮ ಪತ್ರ ಬಂದ ಹಿನ್ನೆಲೆ ಅಪ್ಪಾಸಾಹೇಬ ಕುಲಗೋಡೆ ಅವರನ್ನು ಅಧ್ಯಕ್ಷರನ್ನಾಗಿ ಘೋಷಣೆ ಮಾಡಿದರು.

Home add -Advt

ಅಧಿಕಾರ ಸ್ವೀಕರಿಸಿದ ಅಪ್ಪಾಸಾಹೇಬ ಕುಲಗೋಡೆ ಅವರಿಗೆ ಶಾಸಕ ಲಕ್ಷ್ಮಣ ಸವದಿ, ಮಾಜಿ ಸಂಸದ ಅಣ್ಣಾಸಹೇಬ ಜೊಲ್ಲೆ ಸೇರಿದಂತೆ ಬ್ಯಾಂಕ್ ಸಿಬ್ಬಂದಿ ಶುಭ ಕೋರಿದರು.

Related Articles

Back to top button