Belagavi NewsBelgaum News

*ಗ್ರಾಮೀಣ ಯುವಜನತೆಗೆ ಸಹಕಾರಿ ತತ್ವ ತಲುಪಿಸಲು ಜಾಗೃತಿ ಮೂಡಿಸೋಣ: ಜೊಲ್ಲೆ ಗ್ರೂಪ್ ಸಂಸ್ಥಾಪಕ ಅಣ್ಣಾಸಾಹೇಬ ಜೊಲ್ಲೆ*

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಂದು 71 ನೇ ಅಖಿಲ ಭಾರತ ಸಹಕಾರಿ ಸಪ್ತಾಹ ಆಚರಣೆ ಅಂಗವಾಗಿ ಯಕ್ಸಂಬಾ ಪಟ್ಟಣದಲ್ಲಿ, ನಮ್ಮ ಸಂಸ್ಥೆಯ ಅಂಗಸಂಸ್ಥೆಯಾದ ಶ್ರೀ ಬೀರೇಶ್ವರ ಕೋ.ಆಫ್ ಕ್ರೆಡಿಟ್ ಸೊಸೈಟಿ ಲಿ.ಯಕ್ಸಂಬಾದ (ಮಲ್ಟಿ-ಸ್ಟೇಟ್)  ಸಹಕಾರ ಜನಕರಾದ ಗದಗ ಜಿಲ್ಲೆಯ ಕಣಗಿನಹಾಳದ ದಿವಗಂತ ಶ್ರೀ ಸಿದ್ದನಗೌಡಾ ಸಣ್ಣರಾಮನಗೌಡಾ ಪಾಟೀಲ ಅವರ ಭಾವಚಿತ್ರಕ್ಕೆ ಜೊಲ್ಲೆ ಗ್ರೂಪ್ ಸಂಸ್ಥಾಪಕ ಹಾಗೂ ಮಾಜಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಅವರು ಪುಷ್ಪ ನಮನ ಸಲ್ಲಿಸಿ, ಸಹಕಾರ ಧ್ವಜಾರೋಹಣವನ್ನು ನೆರವೇರಿಸಿದರು. 

ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ ರಾಷ್ಟ್ರದ ಮತ್ತು ರಾಜ್ಯದ ಆರ್ಥಿಕ ಪ್ರಗತಿಗೆ ಪೂರಕವಾಗಿರುವ ಸಹಕಾರ ಕ್ಷೇತ್ರದ ಸಾಧನೆಗಳನ್ನು ಸಾರ್ವಜನಿಕರ ಗಮನಕ್ಕೆ ತರುವುದು ಬಹಳ ಮುಖ್ಯವಾಗಿದೆ. ಗ್ರಾಮೀಣ ಭಾಗದಲ್ಲಿ ಜನಸಾಮಾನ್ಯರಿಗೆ ಹಾಗೂ ಯುವಕರಿಗೆ ಸಹಕಾರಿ ತತ್ವ ತಲುಪುವಂತೆ ಮಾಡಬೇಕು. ಅವರಿಗೆ ಸಹಕಾರ ಕ್ಷೇತ್ರದ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಿ, ಸಹಕಾರಿ ಕ್ಷೇತ್ರವನ್ನು ಬಲಪಡಿಸುವುದು ನಮ್ಮ ಉದ್ದೇಶವಾಗಿದೆ.

Related Articles
Home add -Advt

ಈ ಸಂದರ್ಭದಲ್ಲಿ ಬೀರೇಶ್ವರ ಸಂಸ್ಥೆಯ ಅಧ್ಯಕ್ಷರಾದ ಜಯಾನಂದ ಜಾಧವ,ನಿರ್ದೇಶಕರಾದ ಶ್ರೀ ಬಿಪಿನ ದೇಶಪಾಂಡೆ,ಲಕ್ಷ್ಮಣ ಕಬಾಡೆ, ಆನಂದ ಪಾಟೀಲ,ಯಾಸಿನ ತಾಂಬೋಳೆ, ಸಿದ್ದವಿರ ಖಜಣ್ಣವರ, ಶರದ ಶಿಂಧೆ,ರಾಜು ಮಗದುಮ್ನ,ರಾಮದಾಸ ಕಾಟೆ ಪ್ರಧಾನ ವ್ಯವಸ್ಥಾಪಕರಾದ ಬಹದ್ದೂರ ಗುರವ,ಮಹಾದೇವ ಮಂಗಾವತೆ,ಸುರೇಶ ಮಾನೆ,ಆರ್.ಜಿ.ಕುಂಬಾರ,ಶಿವಪುತ್ರ ಡಬ್ಬ,ಸತೀಶ ಲಠ್ಠೆ,ಸಿಬ್ಬಂದಿಗಳು ಉಪಸ್ಥಿತರಿದ್ದರು.

Related Articles

Back to top button