Kannada NewsKarnataka NewsNationalPolitics

*ಕಲ್ಲುಕ್ವಾರಿಯಲ್ಲಿ ಭೀಕರ ಸ್ಪೋಟ: ಇಬ್ಬರು ಕಾರ್ಮಿಕರ ಸ್ಥಿತಿ ಚಿಂತಾ ಜನಕ*

ಪ್ರಗತಿವಾಹಿನಿ ಸುದ್ದಿ : ಕಲ್ಲುಕ್ವಾರಿಯಲ್ಲಿ ಇಟ್ಟಿದ್ದ ಮದ್ದು ಸ್ಫೋಟಗೊಂಡ ಪರಿಣಾಮ ಇಬ್ಬರು ಕಾರ್ಮಿಕರು ಗಂಭೀರ ಗಾಯಗೊಂಡಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಹೊಸಹಳ್ಳಿ ಗ್ರಾಮದ ಬಳಿ ನಡೆದಿದೆ.

ಮದ್ದು ಸ್ಫೋಟಗೊಂಡ ಪರಿಣಾಮ ಮಂಜುನಾಥ್ ಹಾಗೂ ಕೋಟಪ್ಪ ಎಂಬುವವರು ಗಂಭೀರ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

Home add -Advt

ಹೊಸಹಳ್ಳಿ ಗ್ರಾಮದಲ್ಲಿ ಕಲ್ಲು ಸ್ಫೋಟಕ್ಕೆಂದು ಕ್ವಾರಿಯಲ್ಲಿ ಮದ್ದು ಇಡಲಾಗಿತ್ತು, ಈ ವೇಳೆ ಮದ್ದು ಸ್ಫೋಟಿಸದ ಕಾರಣ ಕಾರ್ಮಿಕರು ಪರಿಶೀಲಿಸಿ ನಿಷ್ಕ್ರಿಯಗೊಳಿಸಲು ಹೋಗಿದ್ದಾರೆ. ಈ ವೇಳೆ ಏಕಾಏಕಿ ಮದ್ದು ಸ್ಫೋಟಗೊಂಡಿದೆ. 

Related Articles

Back to top button