ಪ್ರಗತಿವಾಹಿನಿ ಸುದ್ದಿ: ರೀಲ್ಸ್ ಮಾಡಿ ಉರಿಸಿದ್ದಕ್ಕೆ ಪೈಲ್ವಾನ್ ಓರ್ವನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೊಳವಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಪ್ರಕಾಶ್ ಇರಟ್ತಿ (26) ಮೃತ ಪೈಲ್ವಾನ್. ಕೊಳವಿ ಗ್ರಾಮದ ಜಾತ್ರೆಯ ವೇಳೆ ಆರೋಪಿಗಳು ಪಕ್ಕಾ ಸ್ಕೆಚ್ ಹಾಕಿ ಹತ್ಯೆ ಮಾಡಿದ್ದರು. ಈ ಪ್ರಕರಣಕ್ಕೆ ಸಬಂಧಿಸಿದಂತೆ ಇದೀಗ ಗೋಕಾಕ್ ಪೊಲೀಸರು ಇಬ್ಬರು ಬಾಲಾರೋಪಿಗಳು ಸೇರಿ 8 ಆರೋಪಿಗಳನ್ನು ಬಂಧಿಸಿದ್ದಾರೆ.
ಕೊಳವಿ ಜಾತ್ರೆ ವೇಳೆ ಪೈಲ್ವಾನ್ ಪ್ರಕಾಶ್ ಹಾಗೂ ರವಿಚಂದ್ರ ಪಾತ್ರೋಟ್ ನಡುವೆ ಗಲಾಟೆಯಾಗಿತ್ತು. ಈ ಗಲಾಟೆ ಬಳಿಕ ಪ್ರಕಾಸ್ ಎರಡು ರೀಲ್ಸ್ ಬಿಟ್ಟಿದ್ದ. ಇದನ್ನು ನೋಡಿ ರವಿಚಂದ್ರ ಹಾಗೂ ಗ್ಯಾಂಗ್ ಉರುದುಕೊಂಡಿತ್ತು. ಇದೇ ಕಾರಣ ಪ್ರಕಾಶ್ ಬೈಕ್ ಅಡ್ದಗಟ್ಟಿ ಹತ್ಯೆ ಮಾಡಿದ್ದರು.
ಇದೀಗ ಕೊಲೆ ಪ್ರಕರಣ ಸಂಬಂಧ 8 ಆರೋಪಿಗಳನ್ನು ಬಂಧಿಸಲಾಗಿದೆ. ರವಿಚಂದ್ರ ಪಾತ್ರೋಟ್, ಉಮೇಶ್ ಕುಮಾರ್, ಮಾರುತಿ ವಡ್ಡರ್, ಅಭಿಷೇಕ್ ಪಾತ್ರೋಟ್, ಮನೋಜ್ ಪಾತ್ರೋಟ್, ವಿಜಯ್ ಕುಮಾರ್ ನಾಯಕ್ ಹಾಗೂ ಇಬ್ಬರು ಬಾಲಾರೋಪಿಗಳು ಬಂಧಿತರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ