*ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಟೆಂಡರ್ ವಿಳಂಬ ಸಂಶಯಕ್ಕೆ ಕಾರಣವಾಗಿದೆ: ಮಹೇಶ್ ಶಿಗಿಹಳ್ಳಿ*
ಪ್ರಗತಿವಾಹಿನಿ ಸುದ್ದಿ: ಕಣಬರಗಿ ಸ್ಕೀಮ್ ನಂಬರ್ 61 ರ ರೈತರು ಇಂದು ಬೆಳಗಾವಿ ನಗರಾಭಿವೃದ್ದಿ ಪ್ರಾಧಿಕಾರ ಕಚೇರಿಗೆ ಬೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು.
ಮಹೇಶ್ ಎಸ್ ಶೀಗಿಹಳ್ಳಿ ನೇತೃತ್ವದಲ್ಲಿ ಬುಡಾ ಕಚೇರಿಗೆ ಆಗಮಿಸಿದ ರೈತರು ಅಧಿಕಾರಿಗಳ ವಿರುದ್ಧ ಗರಂ ಆದರು. ಸ್ಕೀಮ್ ನಂಬರ್ 61 ರ ಅಭಿವೃದ್ದಿಗಾಗಿ ರೈತರಿಂದ ಜಮೀನು ಪಡೆದು 19 ವರ್ಷಗಳು ಕಳೆದರೂ ಯಾವುದೇ ಅಭಿವೃದ್ಧಿ ಕೈಗೊಳ್ಳದ ಕಾರಣ ರೈತರು ಆಕ್ರೋಶ ವ್ಯಕ್ತಪಡಿಸಿದರು. ಈಗಾಗಲೇ ಹಲವು ಹೋರಾಟ ಮಾಡಿ ನಗರಾಭಿವೃದ್ದಿ ಪ್ರಾಧಿಕಾರಕ್ಕೆ ಬಿಸಿ ಮುಟ್ಟಿಸಿದರೂ ಅಧಿಕಾರಿಗಳು ಆಯುಕ್ತರು ಮತ್ತು ಬುಡಾ ಚೇರ್ಮನ್ ರವರು ಸರಿಯಾದ ಜವಾಬ್ದಾರಿ ವಹಿಸದೆ ಮಂದಗತಿಯಲ್ಲಿ ಅಭಿವೃದ್ಧಿ ಮಾಡುತ್ತಿದ್ದಾರೆ. ರೈತರು ಹೋರಾಟ ಮಾಡಿದಾಗಲೆಲ್ಲ ರೈತರ ಮೂಗಿಗೆ ತುಪ್ಪ ಸವರುವ ಪ್ರಯತ್ನ ಮಾಡಿ 20 ಲಕ್ಷದ ಟೆಂಡರ್ ಪಾಸ್ ಮಾಡಿ ಮಂದಗತಿಯಲ್ಲಿ 10 ದಿನ ಕಾರ್ಯ ಪ್ರಾರಂಭಿಸಿ 20 ದಿನ ಮತ್ತೆ ಆ ಅಬಿವೃದ್ಧಿ ಕೆಲಸವನ್ನು ಅರ್ಧಕ್ಕೆ ಮೊಟುಕು ಗೋಳಿಸಿ ರೈತರ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಮೂಲ ಕೋಟ್ಯಂತರ ರೂಪಾಯಿಗಳ ಮುಖ್ಯ ಟೆಂಡರ್ ರನ್ನು ಪಾಸ್ ಮಾಡದೆ ಅರ್ಧಂಬರ್ದ ಕೆಲಸ ಮಾಡುತ್ತಾ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ. ಇದು ಹಲವಾರು ಅನುಮಾನಕ್ಕೆ ಕಾರಣವಗಿದ್ದು, ಮುಖ್ಯ ಟೆಂಡರ್ ಪಾಸ್ ಮಾಡದಿರಲು ಕಾರಣವೇನು ಎಂದು ಪ್ರಶ್ನಿಸಿದರು.
ಬುಡಾ ಡೆವಲಪ್ಮೆಂಟ್ ಕಮಿಷನ್ ಗಾಗಿ ಹೊಂದಾಣಿಕೆ ಆಗದ ಕಾರಣ ನಿಮ್ಮ ಲಾಭಕ್ಕಾಗಿ ರೈತರಿಗೆ ಅನ್ಯಾಯ ಮಾಡುತ್ತಿದ್ದೀರಾ? ಎಂದು ಕೇಳಿದರು. ಇದರಿಂದ ಬೆಳಗಾವಿ ಜಿಲ್ಲೆಯ ರೈತರು ಬುಡಾ ಎಂದ ತಕ್ಷಣ ಕೋಪ ಬರುವ ವಾತಾವರಣ ಸೃಷ್ಟಿ ಆಗಿದೆ ಇದು ಬುಡಾ ಪ್ರಾಧಿಕಾರ ಮತ್ತು ಸರ್ಕಾರ ನಾಚಿಕೆ ಪಡುವ ಸಂಗತಿ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು. ಇದೆ ತಿಂಗಳಲ್ಲಿ ಮೂಲ ಮುಖ್ಯ ಟೆಂಡರ್ ಫೈನಲ್ ಮಾಡದೇ ಹೋದರೆ ಕಾರ್ಯ ಪ್ರಾರಂಭವಾಗದಿದ್ದರೆ ರೈತರಿಗೆ NOC ನೀಡಿ 19 ವರ್ಷಗಳ ಪರಿಹಾರ ನೀಡಬೇಕು ಎಂದು ಎಚ್ಚರಿಸಿದರು.
ಈ ಸಂದರ್ಬದಲ್ಲಿ ಕಣಬರಗಿ ಸ್ಕೀಮ್ ನಂಬರ್ 61 ರೈತರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ ಸಂಘಟನೆಯ ರಾಜ್ಯಾಧ್ಯಕ್ಷರು ಮಹೇಶ ಎಸ್ ಶಿಗಿಹಳ್ಳಿ ಬುಡಾ ಅಧಿಕಾರಿಗಳ ವಿರುದ್ಧ ಗುಡುಗಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ