Karnataka NewsPolitics

*ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋದವರನ್ನು ಯೂಸ್ ಮಾಡಿ ಬಿಸಾಕುತ್ತಾರೆ: ಡಿ.ಕೆ ಶಿವಕುಮಾರ್ ವ್ಯಂಗ್ಯ*

ಪ್ರಗತಿವಾಹಿನಿ ಸುದ್ದಿ : ರಾಜ್ಯ ಬಿಜೆಪಿಯಲ್ಲಿ ಭಿನ್ನಮತೀಯರ ಕಲಹ, ಅದೆಲ್ಲಾ ನಮಗೆ ಬೇಕೂ ಇಲ್ಲ. ಕಾಂಗ್ರೆಸ್‌ನಿಂದ ಅಲ್ಲಿಗೆ ಹೋಗಿರುವವರನ್ನು ಯೂಸ್ ಮಾಡಿ ಬಿಸಾಕುತ್ತಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅಭಿಪ್ರಾಯಪಟ್ಟರು.

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣದಂತೆಯೇ ವಿಜಯೇಂದ್ರ ವಿರುದ್ಧ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗಿ ಸಂಸದರಾಗಿರುವ ಡಾ.ಕೆ.ಸುಧಾಕರ್ ಇತ್ತೀಚೆಗೆ ಸಿಡಿದೆದ್ದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಕೆಲಸ ಆಗುವವರೆಗೆ ಬಳಸಿಕೊಳ್ಳುತ್ತಾರೆ. ಕಾಂಗ್ರೆಸ್‌ನಿಂದ ಅಲ್ಲಿಗೆ ಹೋದವರ ಪಾಡು ಹಾಗೇ ಆಗಿದೆ ಎಂದರು. ಇನ್ನು ಯತ್ನಾಳ್‌ ಬಂಡಾಯದ ವಿಷಯ ಅವರ ಸುದ್ದಿ ನಮಗೆ ಯಾಕೆ ಎಂದಿರುವ ಡಿಕೆಶಿ, ಅವರಲ್ಲಿನ ಬಂಡಾಯದಿಂದ ಕಾಂಗ್ರೆಸ್‌ಗೆ ಯಾವ ಅನುಕೂಲವಾಗಲ್ಲ. ಆಗಬೇಕೂ ಇಲ್ಲ ಎಂದು ಕೌಂಟರ್ ನೀಡಿದರು.

Home add -Advt

ನಾವು ಯಾರ ಒಳ ಜಗಳವನ್ನು ಅವಲಂಬಿಸಿ ರಾಜಕಾರಣ ಮಾಡುತ್ತಿಲ್ಲ. ನಮ್ಮ ರಾಜಕಾರಣ ಏನಿದ್ದರೂ ಜನರಿಗಾಗಿ. ನಮ್ಮ ಮೇಲೆ ನಂಬಿಕೆ ಇಟ್ಟು ಅಧಿಕಾರ ನೀಡಿದ್ದಾರೆ. ಅವರ ಭರವಸೆ ಈಡೇರಿಸುವುದು ನಮ್ಮ ಕೆಲಸ. ಅವರ ಒಳ ಜಗಳ ಮುಚ್ಚಿಕೊಳ್ಳಲು ಆಗಾಗ ಕಾಂಗ್ರೆಸ್ ಅನ್ನು ನಮ್ಮ ಸರ್ಕಾರದ ಯೋಜನೆಗಳನ್ನು ಸುಮ್ಮನೇ ಟೀಕಿಸುತ್ತಿದ್ದಾರೆ. ಅವರಿಗೆ ಜನ ಅಧಿಕಾರ ಕೊಟ್ಟಾಗ ಜವಾಬ್ದಾರಿ ಮರೆತಿದ್ದರು. ಈಗ ವಿಪಕ್ಷ ಸ್ಥಾನದಲ್ಲಿರುವ ಬಿಜೆಪಿಯವರು ಆ ಕೆಲಸವನ್ನಾದರೂ ಸರಿಯಾಗಿ ಮಾಡಲಿ ಎಂದು ಡಿಕೆಶಿ ಅವರು ಕಿವಿ ಹಿಂಡಿದರು.

Related Articles

Back to top button