*ಮಹಾಶಿವರಾತ್ರಿಯಂದೇ ಮಹಾಕುಂಭ ಮೇಳಕ್ಕೆ ತೆರೆ; ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ ಪುನೀತರಾದ ಕೋಟ್ಯಂತರ ಭಕ್ತರು*

ಪ್ರಗತಿವಾಹಿನಿ ಸುದ್ದಿ: ಇಂದು ದೇಶಾದ್ಯಂತ ಮಹಾಶಿವರಾತ್ರಿ ಸಂಭ್ರಮ. ಎಲ್ಲೆಲ್ಲೂ ಶಿವಧ್ಯಾನ, ಓಂ ನಮಃ ಶಿವಾಯ ಎಂಬ ಮಂತ್ರ ಪಠಣ ಮೊಳಗುತ್ತಿದೆ. ಮಹಾಶಿವರಾತ್ರಿಯ ವಿಶೇಷ ಸಂದರ್ಭದಲ್ಲಿಯೇ ಮಹಾಕುಂಭ ಮೇಳಕ್ಕೆ ಇಂದು ಕೊನೇ ದಿನವಾಗಿದೆ.
ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಕಳೆದ 45 ದಿನಗಳಿಂದ ನಡೆಯುತ್ತಿರುವ ವಿಸ್ವದ ಅತಿದೊಡ್ಡ ಆಧ್ಯಾತ್ಮಿಕ ಹಬ್ಬ ಮಹಾ ಕುಂಭಮೇಳಕ್ಕೆ ಇಂದು ತೆರೆ ಬೀಳಲಿದೆ. ಮಹಾಶಿವರಾತ್ರಿಯ ಪುಣ್ಯ ದಿನದಂದೇ ಮಹಾಕುಂಭಮೇಳ ಸಂಪನ್ನವಾಗುತ್ತಿರುವ ಹಿನ್ನೆಲೆಯಲ್ಲಿ ಪರ್ಯಾಗ್ ರಾಜ್ ನತ್ತ ಭಕ್ತ ಸಾಗರವೇ ಹರಿದುಬಂದಿದೆ.
ಶಿವರಾತ್ರಿ ಹಾಗೂ ಮಹಾಕುಂಭ ಮೇಳದ ಕೊನೆ ದಿನವಾಗಿರುವುದರಿಂದ ಇಂದು ಮುಂಜಾನೆಯೇ ಕೋಟ್ಯಂತರ ಭಕ್ತರು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. ಪ್ರಯಾಗ್ ರಾಜ್ ನಲ್ಲಿ ದೋಣಿಯಲ್ಲಿ ತೆರಳಿ ತ್ರಿವೇಣಿ ಸಂಗಮದಲ್ಲಿ ಭಕ್ತರು ಶಾಹಿ ಸ್ನಾನ ಮಾಡುತ್ತಿದ್ದು, ಗಂಗಾ-ಯಮುನಾ-ಗುಪ್ತಗಾಮಿನಿ ಸರಸ್ವತಿ ನದಿ ಸಂಗಮದ ತೀರದಲ್ಲಿ ಹೆಜ್ಜೆ ಇಡಲು ಜಾಗವಿಲ್ಲದಷ್ಟು ಜನರು ಕಿಕ್ಕಿರಿದು ನೆರೆದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ