Latest

ಬಿಜೆಪಿ ಯುವ ಮುಖಂಡ ಸೇರಿ 8 ಜನರಿಗೆ ಜೈಲು ಶಿಕ್ಷೆ

ಪ್ರಗತಿವಾಹಿನಿ ಸುದ್ದಿ; ಮೈಸೂರು: ಬಾರ್ ಮಾಲೀಕನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಯುವ ಮುಖಂಡ ಸೇರಿದಂತೆ 8 ಮಂದಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ನಂಜನಗೂಡು ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಧನರಾಜ್ ಹಾಗೂ ಆತನ ಸ್ನೇಹಿತ ನಟೇಶ್, ಕುಮಾರ್, ನಂಜಪ್ಪ, ದೇವರಾಜ್, ಮೂರ್ತಿ, ಕೃಷ್ಣ ಮತ್ತು ಮಂಜು ಶಿಕ್ಷೆಗೆ ಗುರಿಯಾದ ಆರೋಪಿಗಳು.

2016ರಲ್ಲಿ ನಡೆದಿದ್ದ ಹಲ್ಲೆ ಪ್ರಕರಣ ಇದಾಗಿದ್ದು, ಇದೀಗ 8 ಅಪರಾಧಿಗಳಿಗೆ ಮೂರು ವರ್ಷ ಜೈಲು ಹಾಗೂ 7500 ರೂ ದಂಡ ವಿಧಿಸಿ ಮೈಸೂರು ಜಿಲ್ಲಾ ಪ್ರಧಾನ ಸೆಷನ್ಸ್ ನ್ಯಾಯಾಲಯ ಆದೇಶ ಹೊರಡಿಸಿದೆ.

Home add -Advt

Related Articles

Back to top button