Belagavi NewsBelgaum NewsHealth

*ಮಾರ್ಚ್ 1 ರಂದು ಉಚಿತ ಹೃದಯರೋಗ ತಪಾಸಣಾ ಶಿಬಿರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಉಚಿತ ಹೃದಯರೋಗ ತಪಾಸಣಾ ಶಿಬಿರ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ, ತಾಲೂಕಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಭಾರತೀಯ ವೈದ್ಯಕೀಯ ಸಂಘದ ಚಿಕ್ಕೋಡಿ ಘಟಕ ಇವುಗಳ ಆಶ್ರಯದಲ್ಲಿ ಚಿಕ್ಕೋಡಿಯ ಬಸವೇಶ್ವರ ವೃತ್ತದಲ್ಲಿರುವ ಕೆಎಲ್ ಇ ಸಂಸ್ಥೆಯ ಆಸ್ಪತ್ರೆಯಲ್ಲಿ  ಹಮ್ಮಿಕೊಳ್ಳಲಾಗಿದೆ.‌

ಇದೇ ಶನಿವಾರ ದಿ. 1 ಮಾರ್ಚ 2025 ರಂದು ಬೆಳಗ್ಗೆ 9.30 ರಿಂದ ಮಧ್ಯಾಹ್ನ 2.30ರವರೆಗೆ  ಉಚಿತ ಹೃದಯರೋಗ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ.

Home add -Advt

ಎದೆ ನೋವು, ಎದೆಯ ಬಿಗಿತ, ಉಸಿರಾಟದ ತೊಂದರೆ, ಕುತ್ತಿಗೆ, ದವಡೆ, ಗಂಟಲು, ಹೊಟ್ಟೆ ಅಥವಾ ಬೆನ್ನಿನಲ್ಲಿ ನೋವು. ಅನಿಯಮಿತ ಹೃದಯ ಬಡಿತ, ನಡೆಯುವಾಗ ಎದೆ ನೋವು, ತೀವ್ರ ಒತ್ತಡ, ಕಾಲುಗಳಲ್ಲಿ/ ಪಾದಗಳಲ್ಲಿ ಭಾವು, ದೌರ್ಬಲ್ಯ, ತಲೆತಿರುಗುವಿಕೆ. ಆಯಾಸ, ತಂಪಾದ ಕಾಲುಗಳು, ಇತ್ಯಾದಿ ಹೃದಯದ ರೋಗಲಕ್ಷಣಗಳನ್ನು ಹೊಂದಿರುವವರು ಶಿಬಿರದಲ್ಲಿ ಪಾಲಗೊಂಡು ಹೃದಯದ ಆರೋಗ್ಯ ತಪಾಸಿಸಿಕೊಳ್ಳುವಂತೆ ಕೋರಲಾಗಿದೆ. 

ಮುಂಚಿತವಾಗಿ ಶಿಬಿರಕ್ಕೆ ರೋಗಿಗಳು ತಮ್ಮ ಹೆಸರನ್ನು ನೊಂದಾಯಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ. 9986992467/9844366188/9535474870/08338274771 ಇಲ್ಲಿಗೆ ಸಂಪರ್ಕಿಸಲು ಕೋರಲಾಗಿದೆ.

Related Articles

Back to top button