*ಜಾಮ್ ಆಯ್ತು ಹಿಂಡಲಗಾ ಗ್ರಾಮಸ್ಥರ ಬದುಕು; ಪ್ರತಿಭಟನೆ ತೀವ್ರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಹಿಂಡಲಗಾ ಜೈಲಿನ ಕೈದಿಗಳ ಕಾನೂನುಬಾಹಿರ ಚಟುವಟಿಗಳಿಗೆ ಬ್ರೇಕ್ ಹಾಕಲು ಜೈಲಿನ ಆವರಣದಲ್ಲಿ ಮೋಬೈಲ್ ಜಾಮರ್ ಅಳವಡಿಕೆ ಮಾಡಲಾಗಿದೆ. ಇದರಿಂದ ಸುತ್ತಲಿನ ಗ್ರಾಮಗಳಿಗೆ ನೇಟ್ ವರ್ಕ್ ಬರದೆ ಜನರು ಪರದಾಡುತ್ತಿದ್ದು, ಪ್ರತಿಭಟಿಸಿ ಆಕ್ರೋಶ ಹೊರ ಹಾಕಿದ್ದಾರೆ.
ಇಂದು ಹಿಂಡಲಗಾ ಜೈಲಿ ಮುಂದೆ ಇರುವ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.
ಬೆಳಗಾವಿ ಗ್ರಾಮೀಣಭಾಗದಲ್ಲಿ ಹಿಂಡಲಗಾ ಜೈಲಿನ ಜಾಮರ್‌ನಿಂದ ಸಮಸ್ಯೆಯಾಗುತ್ತಿದ್ದು, ಜೈಲಿನ ಚೇರಮನ್ ಆಗಿರುವ ಶಾಸಕರು ಹಸ್ತಕ್ಷೇಪ ಮಾಡಿ ಜನರ ಸಮಸ್ಯೆಯನ್ನು ಪರಿಹರಿಸಬೇಕು. ಈ ಸಮಸ್ಯೆಗೆ ಪರಿಹಾರ ಸಿಗುವವರೆಗೂ ಹೋರಾಟ ನಿರಂತರವಾಗಿದೆ. ಎಂದು ಗ್ರಾಮಸ್ಥರು ಎಚ್ಚರಿಕೆಯನ್ನು ನೀಡಿದರು. ಇನ್ನು ಜನರ ಮನವಿಯನ್ನು ಸ್ವೀಕರಿಸಲು ಆಗಮಿಸಿದ ಹಿಂಡಲಗಾ ಜೈಲಿನ ಅಧಿಕ್ಷಕರಾದ ಕೃಷ್ಣಮೂರ್ತಿ ಮುಂದೆ ಜನರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಹಿಂಡಲಗಾ ಜೈಲಿನ ಅಧಿಕ್ಷಕರಾದ ಕೃಷ್ಣಮೂರ್ತಿ ಅವರು ಹಿಂದೆಯೂ ಕೂಡ ಇಲ್ಲಿನ ಜನರು ಈ ಕುರಿತು ಮನವಿಯನ್ನು ಸಲ್ಲಿಸಿದ್ದರು. ಜಾಮರ್ ಅಳವಡಿಕೆ ಪ್ರಕ್ರಿಯೆ ಇನ್ನು ಪ್ರಗತಿಪಥದಲ್ಲಿದೆ. ಮೇಲಾಧಿಕಾರಿಗಳ ಗಮನಕ್ಕೂ ಕೂಡ ತರಲಾಗಿದೆ. ಜಾಮರ್ ಅಳವಡಿಕೆಯಿಂದಾಗಿ ತಮಗೂ ಕೂಡ ತೊಂದರೆಯಾಗುತ್ತಿದೆ. ತಜ್ಞರ ತಂಡದೊಂದಿಗೆ ಚರ್ಚಿಸಿ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆಯನ್ನು ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ