Belagavi NewsBelgaum News

*ರಸ್ತೆ ಅಪಘಾತದಲ್ಲಿ ಪಿಡಿಓ ಸಾವು*

ಪ್ರಗತಿವಾಹಿನಿ ಸುದ್ದಿ: ರಸ್ತೆ ಅಪಘಾತದಲ್ಲಿ ಗ್ರಾಮ ಪಂಚಾಯತ್ ಪಿಡಿಓ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಅಥಣಿ ತಾಲೂಕಿನ ಅನಂತಪುರ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಅನಂತಪುರ ಗ್ರಾಮದಿಂದ ತಾಂವಶಿ ಮಾರ್ಗವಾಗಿ ಸಾಗುವ ವೇಳೆ ಮಂಗಳವಾರ ಸಾಯಂಕಾಲ 5:30 ನೀ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ನಾಗನೂರ ಪಿಎ ಗ್ರಾಮದ ಅಶೋಕ ಸನದಿ (48) ಮೃತ ಪಟ್ಟಿದ್ದಾನೆ.

Home add -Advt

ಕಳೆದ 20 ವರ್ಷಗಳಿಂದ ವಿವಿಧ ಗ್ರಾಮ ಪಂಚಾಯತ್‌ ಕಾರ್ಯಾಲಯಗಲ್ಲಿ ಸೇವೆಯಲ್ಲಿದ್ದು, ಕಳೆದ 6 ತಿಂಗಳುಗಳಿಂದ ಅನಾರೋಗ್ಯ ಕಾರಣ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ವೈಯಕ್ತಿಕ ಕೆಲಸದ ನಿಮಿತ್ತ ಅನಂತಪುರ ಗ್ರಾಮಕ್ಕೆ ಹೋದ ಅಶೋಕ ಮನೆಗೆ ಬರುವ ವೇಳೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಬೈಕ್ ಹಿಂಭಾಗ ಸಂಪೂರ್ಣ ನುಜ್ಜು ಗುಜ್ಜಾಗಿದ್ದು, ಹಿಂಬದಿಯಿಂದ ಯಾರೋ ಡಿಕ್ಕಿ ಹೊಡೆದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ. ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಅಥಣಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button