Kannada NewsKarnataka NewsLatest

ದಿ. ಡಾ. ಶಂಭಾ ಜೋಶಿ ಕನ್ನಡ ಸಾಂಸ್ಕೃತಿಕ ಭವನಕ್ಕೆ ಶಂಕುಸ್ಥಾಪನೆ

ಪ್ರಗತಿವಾಹಿನಿ ಸುದ್ದಿ, ಸವದತ್ತಿ -ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಜಿಲ್ಲಾ ವತಿಯಿಂದ ಸವದತ್ತಿ ತಾಲೂಕಿನ ದಢೇರಕೊಪ್ಪ ಗ್ರಾಮದಲ್ಲಿ ದಿ. ಡಾ. ಶಂಭಾ ಜೋಶಿ ಕನ್ನಡ ಸಾಂಸ್ಕೃತಿಕ ಭವನಕ್ಕೆ ಶಂಕುಸ್ಥಾಪನೆ ನಡೆಯಿತು.
ಸವದತ್ತಿ ತಾಲೂಕಿನ ದಢೇರಕೊಪ್ಪ ಗ್ರಾಮದಲ್ಲಿ ದಿ. ಡಾ.ಶಂಭಾ ಜೋಶಿ ಸಾಹಿತ್ಯಿಕ/ಸಾಂಸ್ಕೃತಿಕ ಕನ್ನಡ ಭವನ ಕಟ್ಟಡದ ಶಂಕುಸ್ಥಾಪನೆಯನ್ನು ಸವದತ್ತಿಯ ಶಾಸಕ  ಆನಂದ ಮಾಮನಿ ನೆರವೇರಿಸಿದರು.

ಕನ್ನಡ ನಾಡು ನುಡಿ ಕಾರ್ಯಕ್ರಮಗಳಿಗೆ ಮತ್ತು ಕನ್ನಡ ಇತಿಹಾಸವನ್ನು ತಿಳಿದುಕೊಳ್ಳುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಟ್ಟಡಗಳು ಸಹಕಾರಿಯಾಗಲಿವೆ ಎಂದು ಮಾಮನಿ ಹೇಳಿದರು.

ಸಾನಿಧ್ಯವನ್ನು  ಶ್ರೀ ಶಿವಬಸವ ಮಹಾ ಸ್ವಾಮಿಗಳು ಹನುಮನಹಾಳ, ಶಿವಾನಂದಮಠ ಮತ್ತು ಶ್ರೀ ಅದ್ವೈತಾನಂದ ಭಾರತಿ ಸ್ವಾಮಿಗಳು ಸಿದ್ಧಾರೂಡ ಮಠ ನಾಗನೂರ ಅಜ್ಜನವರು ವಹಿಸಿದ್ದರು.

ಖ್ಯಾತ ಸಾಹಿತಿ ವಾಯ್ ಎಮ್ ಯಾಕೊಳ್ಳಿ ಮಾತನಾಡಿದರು. ಅಧ್ಯಕ್ಷತೆಯನ್ನು ವಹಿಸಿದ ಕ.ಸಾ.ಪ. ಬೆಳಗಾವಿ ಜಿಲ್ಲಾ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಮಾತನಾಡುತ್ತಾ, ಎಲ್ಲರ ಸಹಕಾರದ ಜೊತೆಗೆ ಇವತ್ತು ಸಾಹಿತ್ಯಿಕ ಕಟ್ಟಡದ ಸಸಿಯನ್ನು ನೆಡುತ್ತಾ ಇದ್ದೇವೆ. ಊರಿನವರು, ಸಾಹಿತಿಗಳು, ಇದನ್ನು ಸಾಹಿತ್ಯಿಕ ಹೆಮ್ಮರವಾಗಿ ಬೆಳಸಲಿ ಎಂದು ಹಾರೈಸಿದರು.
ಕ.ಸಾ.ಪ. ತಾಲೂಕಾ ಅಧ್ಯಕ್ಷ  ಸಿ.ಬಿ.ದೊಡಗೌಡ, ಜಿಲ್ಲಾ ಕಾರ್ಯದರ್ಶಿ ಎಮ್ ವಾಯ್ ಮೆಣಶಿನಕಾಯಿ,  ಸಾಹಿತಿ ಬಿ.ಕೆ ಹೊಂಗಲ, ಇಂಜನೀಯರ್ ಬಿ.ಟಿ. ಭಾವಿಕಟ್ಟಿ ಹಾಗೂ ಕಟ್ಟಡದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿರುವ  ರಾಜಶೇಖರ ಸವದತ್ತಿ  ಉಪಸ್ಥಿತರಿದ್ದರು. ಊರಿನ  

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button