Belagavi NewsBelgaum NewsKarnataka News

*ಮಲಪ್ರಭಾ ನದಿಯಲ್ಲಿ ಕಾಲು ಜಾರಿ ಬಿದ್ದು ಬಾಲಕ ಸಾವು*

ಪ್ರಗತಿವಾಹಿನಿ ಸುದ್ದಿ: ಆಕಳಿನ ಮೈ ತೊಳೆಯಲು ಹೋಗಿ ಕಾಲು ಜಾರಿ ನದಿಗೆ ಬಾಲಕನೋರ್ವ ಬಿದ್ದು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ನಡೆದಿದೆ.

ಬೂದಿಹಾಳ ಗ್ರಾಮದ ಮಲಕಾಜಿ ವಿಠಲ ಕಂಬಳಿ (15) ಮೃತಪಟ್ಟ ಬಾಲಕ. ಗ್ರಾಮದ ಹತ್ತಿರದಲ್ಲಿರುವ ಮಲಪ್ರಭಾ ನದಿಯಲ್ಲಿ ಆಕಳಿನ ಮೈ ತೊಳೆಯುವಾಗ ಕಾಲು ಜಾರಿ ಬಿದ್ದು ಈ ಘಟನೆ ನಡೆದಿದೆ. 

Home add -Advt

ಬೈಲಹೊಂಗಲ ಅಗ್ನಿ ಶಾಮಕ ಸಿಬ್ಬಂದಿಗಳು ಮೃತ ಬಾಲಕನ ಶವ ಪತ್ತೆ ಮಾಡಿದ್ದಾರೆ. ಮೃತ ಬಾಲಕ ಬೂದಿಹಾಳ ಸರ್ಕಾರಿ ಶಾಲೆಯಲ್ಲಿ 8ನೇ ತರಗತಿ ತೇರ್ಗಡೆಯಾಗಿದ್ದನು. ಶಾಲೆಗೆ ರಜೆ ಇದ್ದರಿಂದ ಆಕಳಿನ ಮೈ ತೊಳೆಯಲು ನದಿಗೆ ತೆರಳಿದಾಗ ಈ ಅವಘಡ ಸಂಬವಿಸಿದೆ. ಸ್ಥಳಕ್ಕೆ ದೊಡವಾಡ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Related Articles

Back to top button