Karnataka News

*ಮನೆ ಮೇಲೆ ಬಿದ್ದ 50 ಜನ ಪ್ರಯಾಣಿಕರಿದ್ದ ಬಸ್*

ಪ್ರಗತಿವಾಹಿನಿ ಸುದ್ದಿ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರಿ ಅನಾಹುತ ಸ್ವಲ್ಪದರಲ್ಲೆ ತಪ್ಪಿದೆ. ಕೆಎಸ್ಆರ್ ಟಿಸಿ ಬಸ್ಸು ರಸ್ತೆ ಪಕ್ಕದ ಮನೆಯ ಮೇಲೆ ಹಾರಿ ಬಿದ್ದಿರುವ ಘಟನೆ ನಡೆದಿದೆ.

ಕೊಪ್ಪ ತಾಲೂಕಿನ ಜಲದುರ್ಗ ಬಳಿ ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ಸುಮಾರು 20 ಮಂದಿಗೆ ಗಾಯಗಳಾಗಿದ್ದು, ಅವರನ್ನು ಜಯಪುರ ಮತ್ತು ಕೊಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ. 50 ಮಂದಿ ಪ್ರಯಾಣಿಕರನ್ನು ಹೊತ್ತ ಸರ್ಕಾರಿ ಬಸ್ ಬೆಂಗಳೂರಿನಿಂದ ಶೃಂಗೇರಿಗೆ ಬರುತ್ತಿತ್ತು. ಕೊಪ್ಪ ತಾಲೂಕಿನ ಜಲದುರ್ಗ ತಲುಪುತ್ತಿದ್ದಂತೆ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮನೆಯ ಮೇಲೆ ಪಲ್ಟಿಯಾಗಿದೆ. ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button