EducationKarnataka News

*ಜನಿವಾರ ತೆಗೆಯದ್ದಕ್ಕೆ ಪರೀಕ್ಷಾ ಕೇಂದ್ರಕ್ಕೆ ನೋ ಎಂಟ್ರಿ: ವಿದ್ಯಾರ್ಥಿಯನ್ನೇ ಪರೀಕ್ಷಾ ಕೇಂದ್ರದಿಂದ ಹೊರ ಕಳುಹಿಸಿದ ಸಿಬ್ಬಂದಿ*

ಪ್ರಗತಿವಾಹಿನಿ ಸುದ್ದಿ: ಶಿವಮೊಗ್ಗದ ಬಳಿಕ ಬೀದರ್ ನಲ್ಲಿಯೂ ಸಿಇಟಿ ಪರೀಕ್ಷಾ ಕೇಂದ್ರದ ಸಿಬ್ಬಂದಿಗಳು ದೊಡ್ಡ ಎಡವಟ್ಟು ಮಾಡಿದ್ದು, ವಿದ್ಯಾರ್ಥಿಯ ಭವಿಷ್ಯವೇ ಹಾಳಾಗುವಂತೆ ಮಾಡಿದ್ದಾರೆ.

Home add -Advt

ಸಿಇಟಿ ಪರೀಕ್ಷೆ ಬರೆಯಲು ಬೀದರ್ ನ ಪರೀಕ್ಷಾ ಕೇಂದ್ರಕ್ಕೆ ಬಂದ ವಿದ್ಯಾರ್ಥಿ ಸುಚಿವೃತ ಕಲಕರ್ಣಿಗೆ ಜನಿವರ ತೆಗೆದು ಪರೀಕ್ಷಾ ಕೇಂದ್ರಕ್ಕೆ ಹೋಗು ಎಂದಿದ್ದಾರೆ. ಅದಕ್ಕೆ ಆತ ಜನಿವಾರ ತೆಗೆಯಲು ಸಾಧ್ಯವಿಲ್ಲ. ಬೇಕಾದರೆ ಚಕ್ ಮಾಡಿ ಒಳಗೆ ಬಿಡಿ ಪರೀಕ್ಷೆಗೆ ಟೈಂ ಆಗುತ್ತಿದೆ ಎಂದಿದ್ದಾನೆ. ಆದರೆ ಸಿಬ್ಬಂದಿಗಳು ಜನಿವಾರ ತೆಗೆಯದಿದ್ದರೆ ಪರೀಕ್ಷಾ ಕೇಂದ್ರಕ್ಕೆ ನೋ ಎಂಟ್ರಿ ಎಂದು ಆತನನ್ನು ಪರೀಕ್ಷಾ ಕೇಂದ್ರಕ್ಕೆ ಬಿಟ್ಟಿಲ್ಲ. ವಿದ್ಯಾರ್ಥಿ ಎಷ್ಟೇ ಮನವಿ ಮಾಡಿದರೂ ಕೇಳಿಲ್ಲ. ನೊಂದ ವಿದ್ಯಾರ್ಥಿ ಪರೀಕ್ಷಾ ಕೇಂದ್ರದಿಂದ ವಾಪಸ್ ಆಗಿದ್ದಾನೆ.

ಬೀದರ್ ನ ಸಾಯಿಸ್ಫೂರ್ತಿ ಕಾಲೇಜಿನ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ನಿನ್ನೆ ಈ ಘಟನೆ ನಡೆದಿದೆ. ವಿದ್ಯಾರ್ಥಿ ಮ್ಯಾಥ್ಸ್ ವಿಷಯದ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ. ಇದರಿಂದಾಗಿ ಆತನಿಗೆ ಇಂಜಿನಿಯರಿಂಗ್ ಸೀಟ್ ಕೈತಪ್ಪುವ ಸಾಧ್ಯತೆ ದಟ್ಟವಾಗಿದೆ. ಪರೀಕ್ಷಾ ಕೇಂದ್ರಗಳ ಸಿಬ್ಬಂದಿಗಳ ಇಲ್ಲಸಲ್ಲದ ನಿಯಮಗಳು ವಿದ್ಯಾರ್ಥಿಯ ಭವಿಷ್ಯಕ್ಕೆ ತೊಂದರೆಯುಂಟುಮಾಡಿದ್ದು, ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ.

Related Articles

Back to top button