Belagavi NewsBelgaum NewsKarnataka News

*ಕೋವಿಡ್ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಕೋಡಿಶ್ರೀ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೋವಿಡ್ ಮಹಾಮಾರಿ ಬೇರೆ ಬೇರೆ ರೂಪದಲ್ಲಿ ಮತ್ತೆ ಐದು ವರ್ಷ ಕಾಡಲಿದೆ ಎಂದು ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು, ಪ್ರಪಂಚದಲ್ಲಿ ಮತ್ತೆ ಯುದ್ಧ ಭೀತಿಯಿದ್ದು ಕೆಲವು ದೇಶಗಳೇ ನಾಶವಾಗಲಿದೆ ಇದರೊಂದಿಗೆ ಲೋಕಕ್ಕೆ ಜಲ ಹಾಗೂ ವಾಯು ಗಂಡಾಂತರವಿದೆ ಎಂದಿದ್ದಾರೆ.

ಮತ್ತೆ ಕೋವಿಡ್ ಕಂಟಕದ ಬಗ್ಗೆಯೂ ಭವಿಷ್ಯ ನುಡಿದಿದ್ದಾರೆ. ಕೋವಿಡ್ ಮಹಾಮಾರಿ ಬೇರೆ ಬೇರೆ ರೂಪದಲ್ಲಿ ಮತ್ತೆ ಐದು ವರ್ಷ ಕಾಡಲಿದೆ ಎಂದಿದ್ದಾರೆ. ಹೀಗಾಗಿ ಜನರು ಜಾಗರೂಕರಾಗಿ ಇರುವುದು ಒಳ್ಳೆಯದು, ಉಸಿರಾಟಕ್ಕೆ ತೊಂದರೆಯಾದರೆ ಸಾವು ಬರುವ ಸಾಧ್ಯತೆಯಿದೆ ಎಂದಿದ್ದಾರೆ.

ಇದಲ್ಲದೇ ಮುಂದಿನ ಐದು ವರ್ಷಗಳ ಕಾಲ ಲೋಕಕ್ಕೆ ವಾಯು, ಜಲದಿಂದ ಗಂಡಾಂತರವಿದೆ. ಹಿಮಾಲಯ ಕರಗಿ ದೆಹಲಿ ವರೆಗೆ ತಲುಪಲಿದೆ. ಮೇಘಸ್ಫೋಟ ಆಗುವ ಸಾಧ್ಯತೆಗಳಿವೆ. ಭೂಕಂಪಗಳು ಸಂಭವಿಸಲಿವೆ ಎಂದು ಹೇಳಿದ್ದಾರೆ.

ಮತೀಯ ಗಲಭೆಗಳು ಹೆಚ್ಚಾಗಲಿವೆ. ರಾಜಕೀಯವಾಗಿ ಅರಸನ ಮನೆಗೆ ಕಾರ್ಮೋಡ ಕವಿದಿತ್ತು. ಯುದ್ಧದ ಭೀತಿ ಮತ್ತೆ ಪ್ರಾರಂಭ ಆಗಲಿದೆ. ಜನರಲ್ಲಿ ಅಶಾಂತಿ ಇದೆ. ಕೆಲವು ದೇಶಗಳು ಅಳಿದು ಹೋಗಲಿವೆ. ಹೊಸ ಹೊಸ ದೇಶಗಳು ಉತ್ಪತ್ತಿಯಾಗುತ್ತವೆ ಎಂದು ಭವಿಷ್ಯ ನುಡಿದಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button