Karnataka NewsPolitics

*ಬಿಜೆಪಿಗೆ ಶಾಕ್ ಕೊಟ್ಟ ಜೆಡಿಎಸ್*

ಮೈಸೂರು ಭಾಗದ ಕಮಲನಾಯಕ ಜೆಡಿಎಸ್ ತೆಕ್ಕೆಗೆ

ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಮೂಲಕ ಚುನಾವಣೆಯಲ್ಲಿ ಮೈತ್ರಿಪಕ್ಷಗಳು ಹೆಚ್ಚಿನ ಬಲಸಾಧಿಸಿದ್ದವು. ಇದೋಗ ಚುನಾವಣೆ ಮುಗಿಯುತ್ತಿದಂತೆ ಜೆಡಿಎಸ್ ಬಿಜೆಪಿ ನಾಯಕರನ್ನೇ ತನ್ನ ಪಕ್ಷದತ್ತ ಸೆಳೆದುಕೊಳ್ಳುತ್ತಿದೆ. ಈ ಮೂಲಕ ಮೈಸೂರು ಭಾಗದಲ್ಲಿ ಚಿಗುರೊಡೆಯುತ್ತಿದ್ದ ಕಮಲವನ್ನು ಚಿವುಟುವ ಕೆಲಸ ಮಾಡುತ್ತಿದೆ.

ಬಿಜೆಪಿ ನಾಯಕ ಕೃಷ್ಣನಾಯಕ್ ಪಕ್ಷಕ್ಕೆ ಗುಡ್ ಬೈ ಹೇಳಿ ಜೆಡಿಎಸ್ ಗೆ ಸೇರ್ಪಡೆಯಾಗಿದ್ದಾರೆ. ಇಂದು ಬೆಂಗಳೂರಿನಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ ಕೃಷ್ಣ ನಾಯಕ್ ಅವರನ್ನು ಜೆಡಿಎಸ್ ಗೆ ಬರಮಾಡಿಕೊಳ್ಳಲಾಯಿತು. ಈ ವೇಳೆ ಕೃಷ್ಣನಾಯಕ್ ಅಪಾರ ಬೆಂಬಲಿಗರು ಜೆಡಿಎಸ್ ಗೆ ಸೇರ್ಪಡೆಯಾಗಿದ್ದಾರೆ.

ಕೃಷ್ಣನಾಯಕ್ 2023ರ ಚುನಾವಣೆಯಲ್ಲಿ ಹೆಚ್.ಡಿ.ಕೋಟೆಯಿಂದ ಬಿಜೆಪಿಯಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು. ಇದೀಗ ಬಿಜೆಪಿ ಮಿತ್ರಪಕ್ಷ ಜೆಡಿಎಸ್ ಗೆ ಸೇರ್ಪಡೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button