Kannada NewsKarnataka NewsLatest

ಕನ್ನಡ ರಾಜ್ಯೋತ್ಸವದಂದು ಕೊಲೆಗೆ ಯತ್ನಿಸಿದ್ದವರ ಬಂಧನ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ನವೆಂಬರ್ 1 ರಂದು ಬೆಳಗಾವಿ ನಗರದಲ್ಲಿ ಆಚರಿಲಾಗುತ್ತಿದ್ದ ಕರ್ನಾಟಕ ರಾಜ್ಯೋತ್ಸವದ ಮೆರವಣಿಗೆ ವೇಳೆ ವಿನಾಕಾರಣ ತಂಟೆ ತೆಗೆದು ಕೊಲೆಗೆ ಯತ್ನಿಸಿ ಪರಾರಿಯಾಗಿದ್ದ 6 ಜನರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.

ಮೆರವಣಿಗೆ ನೋಡಲು ಹಳೇ ಶನಿವಾರ ಕೂಟ ಬಳಿ ಆಕಾಶ ಸಂಜಯ ಪಿಸೆ ಹಾಗೂ ಅವರ ಅಣ್ಣ  ನಿರಂಜನ ಸಂಜಯ ಪಿಸೆ ಬಂದಿದ್ದರು. ಈ ವೇಳೆ ಕೆಲವರು ವಿನಾಕಾರಣ ಆಕಾಶ್ ಗೆ ಒದ್ದು ತಂಟೆ ಮಾಡಿದ್ದಲ್ಲದೇ ಅವರ ಅಣ್ಣ ನಿರಂಜನ ಸಂಜಯ ಪಿಸೆಯ ಕುತ್ತಿಗೆಗೆ ಹರಿತವಾದ ಆಯುಧದಿಂದ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿದ್ದರು. ನಂತರ ಅಲ್ಲಿಂದ ಓಡಿ ಹೋಗಿ ಪರಾರಿಯಾಗಿದ್ದರು.

ಈ ಬಗ್ಗೆ ಖಡೇಬಜಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿತರ ಪತ್ತೆಗಾಗಿ ಬಲೆ ಬೀಸಿ, ಸಿಸಿಟಿವಿ ಫುಟೇಜ್ ಹಾಗೂ ಇನ್ನಿತರ ಮಾಹಿತಿದಾರರಿಂದ ಮಾಹಿತಿ ಕಲೆ ಹಾಕಿ ಆರೋಪಿತರ ಜಾಡು ಹಿಡಿದು ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

೧. ಇಮಾಮಸಾಬ @ ಶಹಬಾಜ ಇಮ್ತಿಯಾಜ ಮಾರಿಹಾಳ, ವಯಸ್ಸು ೨೨ ವರ್ಷ, ಸಾ: ಡಿಸಿಸಿ ಬ್ಯಾಂಕ ಹಿಂದೆ, ಕಸಾಯಿಗಲ್ಲಿ, ಬೆಳಗಾವಿ
೨. ಶೈಪ್‌ಅಲಿ ಜಾಫರ ಬೇಪಾರಿ, ವಯಸ್ಸು ೧೯ ವರ್ಷ, ಸಾ: ಮನೆ ನಂ-೨೭೧೧, ಡಿಸಿಸಿ ಬ್ಯಾಂಕ್ ಹಿಂದೆ, ಕಸಾಯಿಗಲ್ಲಿ, ಬೆಳಗಾವಿ.
೩. ಶಾರೂಖಾನ ಬಶೀರ ಪಠಾಣ, ವಯಸ್ಸು: ೨೨ ವರ್ಷ, ಸಾ: ಹರ್ಷ ಹೊಟೇಲ್ ಹಿಂದೆ ೨ನೇ ಕ್ರಾಸ್, ಆಟೋನಗರ, ಬೆಳಗಾವಿ.
೪. ಆದಿಲ್ ಮುಸ್ತಾಕ ಬೇಪಾರಿ, ವಯಸ್ಸು ೨೧ ವರ್ಷ, ಸಾ: ಮನೆ ನಂ-೨೭೬೧, ಕಸಾಯಿಗಲ್ಲಿ, ಬೆಳಗಾವಿ.
೫. ಅಮೀನ ಯುನೂಸ್ ಚೌದರಿ, ವಯಸ್ಸು ೨೧ ವರ್ಷ, ಸಾ: ಮನೆ ನಂ-೨೭೦೧/ಎ, ದುರ್ಗಾದೇವಿ ಮಂದಿರದ ಮುಂದೆ, ಕಸಾಯಿಗಲ್ಲಿ, ಬೆಳಗಾವಿ.
೬. ಅಜಾನ ಯುನೂಸ್ ಚೌದರಿ, ವಯಸ್ಸು ೨೦ ವರ್ಷ, ಸಾ: ಮನೆ ನಂ-೨೭೦೧/ಎ, ದುರ್ಗಾದೇವಿ ಮಂದಿರದ ಮುಂದೆ, ಕಸಾಯಿಗಲ್ಲಿ, ಬೆಳಗಾವಿ

ಇವರನ್ನು ವಶಕ್ಕೆ ಪಡೆದುಕೊಂಡು, ಕೃತ್ಯಕ್ಕೆ ಬಳಸಿದ ಆಯುಧ ಜಪ್ತು ಮಾಡಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.  ಈ ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನಿಬ್ಬರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಲಾಗಿದೆ.

ಈ ಪ್ರಕರಣದ ಆರೋಪಿಗಳ ಪತ್ತೆ ಮಾಡಿದ  ಎನ್ ವ್ಹಿ ಭರಮಣಿ ಎಸಿಪಿ ಮಾರ್ಕೇಟ್ ಉಪ ವಿಭಾಗ,  ಮಹಾಂತೇಶ್ವರ ಜಿದ್ದಿ, ಎಸಿಪಿ ಅಪರಾಧ ವಿಭಾಗ,  ಚಂದ್ರಪ್ಪ, ಎ. ಎಸಿಪಿ ಖಡೆಬಜಾರ ಉಪ ವಿಭಾಗ ಬೆಳಗಾವಿ ನಗರ,  ಧೀರಜ ಬಿ ಶಿಂಧೆ, ಪಿ ಐ ಖಡೆಬಜಾರ ಠಾಣೆ ಹಾಗೂ ಖಡೆಬಜಾರ ಠಾಣೆಯ  ಎಮ್ ಎಸ್ ಗಣಾಚಾರಿ, ಪಿಎಸ್‌ಐ (ಅವಿ) ಖಡೆಬಜಾರ,  ಶಶಿಕುಮಾರ ಕುರಳೆ, ಪ್ರೊ.ಪಿಎಸ್‌ಐ ಸಿಎಚ್‌ಸಿ, ಎಸ್. ಎಮ್ ಶಿಂಧೆ, ಡಿ ಜಿ ಹಟ್ಟಿಕರ, ಬಿ. ಎ. ನವಕುಡಿ, ಸಿಪಿಸಿ ವಾಯ್ ಬಿ ಹತ್ತರವಾಟ, ಆರ್. ಬಿ. ಗಣಿ ಇವರ ತಂಡವನ್ನು ಪೊಲೀಸ್ ಆಯುಕ್ತರು  ಶ್ಲಾಘಿಸಿದ್ದಾರೆ.

ಸಾರಾಯಿ ಮಾರಾಟಗಾರರ ಬಂಧನ

 ಬೆಳಗಾವಿ ನಗರ ಸಿಸಿಐಬಿ ಪೊಲೀಸರು ಅಕ್ರಮ ಸರಾಯಿ ಮಾರಾಟಗಾರನನ್ನು ಬಂಧಿಸಿ, ವಿವಿಧ ಕಂಪನಿಯ ಒಟ್ಟು ರೂ.೨೮,೦೭೨/- ಮೌಲ್ಯದ ಒಟ್ಟು ೧೦೬.೩೦೦ ಲೀಟ್‌ರ ಅಕ್ರಮ ಸರಾಯಿ ಜಪ್ತು ಮಾಡಿದ್ದಾರೆ.

ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯ ಹದ್ದಿಯ ಬಾದರವಾಡಿ ಗ್ರಾಮದಲ್ಲಿ ಒಬ್ಬನು ತನ್ನ ಮನೆಯಲ್ಲಿ ಗೋವಾ ರಾಜ್ಯದ ವಿವಿಧ ಕಂಪನಿ ಸರಾಯಿ ಬಾಟಲಗಳನ್ನು ಇಟ್ಟುಕೊಂಡು ಸ್ಥಳೀಯರಿಗೆ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದಾನೆಂದು ಬಂದ ಖಚಿತ ಮಾಹಿತಿಯನ್ನು  ಆಧರಿಸಿ, ಮಹಾಂತೇಶ್ವರ ಜಿದ್ದಿ ಎಸಿಪಿ ಅಪರಾಧ ಮತ್ತು ಶಿವಾರೆಡ್ಡಿ ಎಸಿಪಿ ಬೆಳಗಾವಿ ಗ್ರಾಮೀಣ ರವರ ಮಾರ್ಗದರ್ಶನದಲ್ಲಿ,  ಸಂಜೀವ ಎಂ ಕಾಂಬಳೆ, ಪಿಐ ಸಿಸಿಐಬಿ ಹಾಗೂ ಅವರ ತಂಡದ ಎಎಸ್‌ಐ ಬಿ ಆರ್ ಮುತ್ನಾಳ, ಎಸ್.ಸಿ. ಕೋರೆ, ಬಿ. ಎನ್. ಬಳಗನ್ನವರ, ಸಿಪಿಸಿ-೧೦೩೫ ಸಿ ಜೆ ಚಿನ್ನಪ್ಪಗೋಳ, ಎ ಕೆ ಕಾಂಬಳೆ, ಎಮ್ ಎಮ್ ವಡೇಯರ, ಎಸ್.ಎಸ್. ಪಾಟೀಲ  ದಾಳಿ ಮಾಡಿದರು.

ಲಕ್ಷ್ಮಣ ಸಾತೇರಿ ಪಾಟೀಲ, (೫೦) ವರ್ಷ, ಸಾ: ಮ ನಂ.೩೧೪ ಬ್ರಹ್ಮಲಿಂಗ ಗಲ್ಲಿ, ಬಾದರವಾಡಿ, ತಾ & ಜಿ : ಬೆಳಗಾವಿ ಇವನನ್ನು ವಶಕ್ಕೆ ಪಡೆದು, ಅವನಿಂದ ಅಕ್ರಮವಾಗಿ ಸಂಗ್ರಹಿಸಿಟ್ಟ ರೂ.೨೮,೦೭೨/- ಮೌಲ್ಯದ ಒಟ್ಟು ೧೦೬.೩೦೦ ಲೀಟ್‌ರ ವಿವಿಧ ಕಂಪನಿ ವಿಸ್ಕಿ, ರಮ್, ವೊಡಕಾ, ಬಿಯರ ಟಿನ್, ಗಾಜಿನ ಮತ್ತು ಪ್ಲ್ಯಾಸ್ಟಿಕ್ ಬಾಟಲ್‌ಗಳನ್ನು ಹಾಗೂ ಮಾರಾಟ ಮಾಡಿ ಬಂದ ಹಣ ರೂ.೨,೬೫೦/- ಇವುಗಳನ್ನು ಜಪ್ತು ಮಾಡಿಕೊಂಡು  ಅಬಕಾರಿ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button