ಪ್ರಗತಿವಾಹಿನಿ ಸುದ್ದಿ, ನವದೆಹಲಿ
ನವದೆಹಲಿ : ಭಾರತ ಅತ್ಯಾಚಾರದ ರಾಜಧಾನಿಯಾಗಿ ಮಾರ್ಪಟ್ಟಿದೆ, ಯುವತಿಯರನ್ನು ರಕ್ಷಿಸಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಇತರ ದೇಶಗಳು ಪ್ರಶ್ನಿಸುತ್ತಿವೆ ಎಂದ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆಗೆ ವೆಂಕಯ್ಯ ನಾಯ್ಡು ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ.
ಭಾನುವಾರ ಪುಣೆಯಲ್ಲಿ ನಡೆದ ಡೀಮ್ಡ್ ವಿಶ್ವವಿದ್ಯಾಲಯ ಪದವಿ ಸಮಾರಂಭದಲ್ಲಿ ವೆಂಕಯ್ಯ ನಾಯ್ಡು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ, ಭಾರತಕ್ಕೆ ಯಾರೂ ಕೆಟ್ಟ ಹೆಸರನ್ನು ತರಬಾರದೆಂದು ಮನವಿ ಮಾಡಿದರು. ನಾವು ಎಂದಿಗೂ ತಾಯ್ನಾಡನ್ನು ಕೆಳಮಟ್ಟಕ್ಕಿಳಿಸಬಾರದು ಮತ್ತು ಅತ್ಯಾಚಾರದಂತಹ ಘಟನೆಗಳಲ್ಲಿ ರಾಜಕೀಯವನ್ನು ಹುದುಗಿಸಬಾರದು ಎಂದು ಹೇಳಿದರು.
ಭಾರತೀಯ ಸಂಪ್ರದಾಯದಲ್ಲಿ, ಮಹಿಳೆಯರನ್ನು ತಾಯಂದಿರು ಮತ್ತು ಸಹೋದರಿಯರೆಂದು ಪರಿಗಣಿಸಲಾಗುತ್ತದೆ, ಆದರೆ ದೇಶದಲ್ಲಿ ಇತ್ತೀಚಿನ ಘಟನೆಗಳು ದೇಶವನ್ನು ನಾಚಿಕೆಪಡಿಸುತ್ತಿವೆ ”ಎಂದು ಉಪರಾಷ್ಟ್ರಪತಿ ಹೇಳಿದರು. ಜೊತೆಗೆ ಹೊಸ ಕಾನೂನುಗಳನ್ನು ತಂದರೆ ಸಮಸ್ಯೆ ಬಗೆಹರಿಯುವುದಿಲ್ಲ ಎಂದರು.
ಹೊಸ ಕಾನೂನು ಮತ್ತು ಮಸೂದೆಗಳನ್ನು ಪರಿಚಯಿಸುವುದನ್ನು ನಾವು ಎಂದಿಗೂ ವಿರೋಧಿಸುವುದಿಲ್ಲ ಎಂದು ಹೇಳಿದರು. ನಿರ್ಭಯಾ ಮಸೂದೆಯಲ್ಲಿ ನಾವು ಕಾನೂನು ಜಾರಿಗೆ ತಂದಿದ್ದೇವೆ, ಆದರೆ ಏನಾಯಿತು? ಸಮಸ್ಯೆ ಪರಿಹಾರವಾಗಿದೆಯೇ? ಎಂದು ಪ್ರಶ್ನಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ