Belagavi NewsBelgaum NewsKannada NewsKarnataka NewsTravel
*ಮುಳ್ಳುರು ಘಾಟ್ ನಲ್ಲಿ ಅಪಘಾತ: ಅರ್ಚಕ ಸೇರಿ ಇಬ್ಬರ ದುರ್ಮರಣ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮುಳ್ಳೂರ ಘಾಟ್ ಬಳಿಯ ಶಿವನ ಮೂರ್ತಿ ಎದುರು ದೇವಸ್ಥಾನದ ಅರ್ಚಕ ಬೈಕ್ ಮೇಲೆ ತೆರಳುವಾಗ ರಸ್ತೆ ಅಪಘಾತ ಸಂಭವಿಸಿದ್ದು, ಅರ್ಚಕ ಹಾಗೂ ಗೂಡ್ಸ್ ಚಾಲಕ ಸಾವನ್ನಪ್ಪಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ಹೊರ ಒಲಯದಲ್ಲಿ ಇರುವ ಮುಳ್ಳುರು ಘಾಟ್ ನಲ್ಲಿ ಚಾಲಕನ ನಿಯಂತ್ರಣತಪ್ಪಿ ದೇವಸ್ಥಾನಕ್ಕೆ ಹೊರಟ್ಟಿದ್ದ ಅರ್ಚಕನ ಸ್ಕೂಟಿಗೆ ಗೂಡ್ಸ್ ವಾಹನ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ದೇವಸ್ಥಾನದ ಮುಖ್ಯ ಅರ್ಚಕ ವಿಜಯಕುಮಾರ್ ಘೋಡಬೋಲೆ (55) ಹಾಗೂ ಕಲಬುರಗಿ ಮೂಲದ ಗೂಡ್ಸ್ ವಾಹನದ ಚಾಲಕ ಅನಿಲ್ ರಮೇಶ ಬಿರಾದಾರ( 23) ಸಾವನ್ನಪ್ಪಿದ್ದಾರೆ.
ಇನ್ನೂ ಈ ಘಟನೆಯಲ್ಲಿ ನಾಲ್ವರಿಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ರಾಮದುರ್ಗ ಡಿವೈಎಸ್ಪಿ ಚಿದಂಬರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಮದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.