ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಬೆಂಗಳೂರು : ಕರ್ನಾಟಕ ಉಪ ಚುನಾವಣಾ ಫಲಿತಾಂಶ ಪರಿಣಾಮದಿಂದಾಗಿ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದಾರೆ. ಉಪಚುನಾವಣೆಯಲ್ಲಿ ಕಾಂಗ್ರೆಸ್, ಸೋಲಿಗೆ ಕಾರಣವಾದ ಹಿನ್ನೆಲೆ ಸೋಲಿನ ನೈತಿಕ ಹೊಣೆ ಹೊತ್ತು ಸೋನಿಯಾ ಗಾಂಧಿಗೆ ಅವರು ತಮ್ಮ ರಾಜೀನಾಮೆ ಪತ್ರವನ್ನು ಕಳುಹಿಸಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಸಾರ್ವಜನಿಕ ತೀರ್ಪನ್ನು ಗೌರವಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿ ಸಿಎಲ್‌ಪಿ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ಹೇಳಿದರು. ಅಲ್ಲದೆ ಸಿದ್ದರಾಮಯ್ಯ ಅವರು ವಿಧಾನಸಭೆಯ ಪ್ರತಿಪಕ್ಷ ನಾಯಕ ಹುದ್ದೆಗೂ ಸಹ ರಾಜೀನಾಮೆ ನೀಡಿದ್ದಾರೆ.
ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 15 ಸ್ಥಾನಗಳಲ್ಲಿ ಕೇವಲ ಎರಡು ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ 13 ಸ್ಥಾನಗಳನ್ನು ಗೆದ್ದು ಅಧಿಕಾರವನ್ನು ಉಳಿಸಿಕೊಂಡಿದೆ.
ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ನೈತಿಕ ಹೊಣೆ ಹೊತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ.
ನನ್ನ ಮೇಲೆ ಭರವಸೆ ಇಟ್ಟು ಜವಾಬ್ದಾರಿಯನ್ನು ನೀಡಿದ್ದ @INCIndia ರಾಷ್ಟ್ರೀಯ ಅಧ್ಯಕ್ಷರಾದ ಸೋನಿಯಾ ಗಾಂಧಿಯವರಿಗೆ ಆಬಾರಿಯಾಗಿದ್ದೇನೆ.@INCKarnataka@kcvenugopalmp pic.twitter.com/kAzxHjnoip— Siddaramaiah (@siddaramaiah) December 9, 2019
I sincerely thank @INCIndia President Smt. Sonia Gandhi for having entrusted me with the responsibilities and I will continue my efforts as a loyal Congressman to strengthen the party. pic.twitter.com/VAwPicLRTU
— Siddaramaiah (@siddaramaiah) December 9, 2019
I respect the mandate given by the electorate in the #KarnatakaBypolls. I expected people to teach @BJP4Karnataka leaders a great lesson for orchestrating #OpertionKamala.
I am taking the moral responsibility & resigning as Leader of CLP & Leader of Opposition. pic.twitter.com/AaG9Xl3SdP
— Siddaramaiah (@siddaramaiah) December 9, 2019
ಸೋಲಿನ ನೈತಿಕ ಹೊಣೆ: ಸಿದ್ದರಾಮಯ್ಯ, ದಿನೇಶ್ ಗುಡೂರಾವ್ ರಾಜಿನಾಮೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ