Kannada NewsKarnataka NewsNationalPolitics

*ಡಿಕೆಶಿ RSS ಗೀತೆ ಹಾಡಿದ್ದು ತಪ್ಪು: ಮಲ್ಲಿಕಾರ್ಜುನ ಖರ್ಗೆ*

ಪ್ರಗತಿವಾಹಿನಿ ಸುದ್ದಿ: ಆರ್ ಎಸ್ಎಸ್  ಪ್ರಾರ್ಥನಾ ಗೀತೆ ಹಾಡಿದ ಡಿಸಿಎಂ ಡಿಕೆ ಶಿವಕುಮಾರಗೆ ಹಲವು ಕಾಂಗ್ರೆಸ್ ನಾಯಕರೆ ವಿರೋಧ ವ್ಯಕ್ತಪಡಿಸಿದ್ರು, ಆದರೆ ಇದೀಗ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೂ ವಿರೋಧಿಸಿದ್ದಾರೆ. 

ಈ ಘಟನೆ ಕರ್ನಾಟಕದ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು. ಬಿಜೆಪಿ ನಾಯಕರು ಡಿ.ಕೆ ಶಿವಕುಮಾ‌ರ್ ನಡೆಯನ್ನು ಕಾಂಗ್ರೆಸ್‌ನ ದ್ವಂದ್ವ ನೀತಿಯ ಉದಾಹರಣೆ ಎಂದರೆ, ಕಾಂಗ್ರೆಸ್‌ನ ಕೆಲವರು ಇದನ್ನು ತಪ್ಪು ಎಂದಿದ್ದರು.

Home add -Advt

ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು..?

ವಿಧಾನಸಭೆಯಲ್ಲಿ ಡಿಕೆಶಿ ಆರ್‌ಎಸ್ಎಸ್‌ ಗೀತೆಯನ್ನು ಹೇಳಬಾರದಿತ್ತು. ಡಿಕೆಶಿ ಆರ್‌ಎಸ್‌ಎಸ್ ಗೀತೆಯನ್ನು ಹಾಡಿ ತಪ್ಪು ಮಾಡಿದ್ದಾರೆ. ಈ ತಪ್ಪು ಆಗಬಾರದಿತ್ತು, ಆದರೆ, ಅವರು ಈಗ ಕ್ಷಮೆ ಕೇಳಿದ್ದಾರೆ. ಈ ವಿಷಯ ಇಲ್ಲಿಗೆ ಮುಗಿಯಲಿ ಎಂದು ಆಶಿಸುತ್ತೇವೆ ಎಂದು ಖರ್ಗೆ ಹೇಳಿಕೆ ನೀಡಿದ್ದಾರೆ.

Related Articles

Back to top button