Kannada NewsKarnataka NewsLatest

*ಎಡಮುರಿ ಫಾಲ್ಸ್ ನಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಸಾವು*

ಪ್ರಗತಿವಾಹಿನಿ ಸುದ್ದಿ: ಫಾಲ್ಸ್ ನೋಡಲೆಂದು ಹೋದ ಇಬ್ಬರು ವಿದ್ಯಾರ್ಥಿಗಳು ಎಡಮುರಿ ಫಾಲ್ಸ್ ನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಎಡಮುರಿ ಫಾಲ್ಸ್ ನಲ್ಲಿ ಈ ದುರಂತ ಸಂಭವಿಸಿದೆ. ಬೆಂಗಳೂರು ಮೂಲದ ಶ್ಯಾಮ್ (20) ಹಾಗೂ ವೆಂಕಟೇಶ್ (20) ಮೃತ ದುರ್ದೈವಿಗಳು.

Home add -Advt

ಇಬ್ಬರೂ ಡಾನ್ ಬಾಸ್ಕೋ ಪದವಿ ಕಾಲೇಜಿನ ವಿದ್ಯಾರ್ಥಿಗಳು. ನಿನ್ನೆ ಕಾಲೇಜಿಗೆ ರಜೆ ಇದ್ದ ಕಾರಣಕ್ಕೆ ಇಬ್ಬರೂ ಫಾಲ್ಸ್ ನೋಡಲೆಂದು ಹೋಗಿದ್ದರು. ಕಾವೇರಿ ನದಿಯಲ್ಲಿ ಈಜಲು ಹೋಗಿ ದುರಂತಕ್ಕೀಡಾಗಿದ್ದಾರೆ. ಕೆ.ಆರ್ ಎಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Related Articles

Back to top button