Kannada NewsNational

ಪತ್ನಿ ಹಾಗೂ ಪ್ರಿಯಕರನ ರುಂಡದೊಂದಿಗೆ ಪೊಲೀಸ್ ಠಾಣೆಗೆ ಹಾಜರಾದ ಪತಿ*

ಪ್ರಗತಿವಾಹಿನಿ ಸುದ್ದಿ: ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯಲ್ಲಿ ಪತಿ, ಪತ್ನಿ ಹಾಗೂ ಆಕೆಯ ಸ್ನೇಹಿತನ ರುಂಡ ಕಡಿದು, ರೊಂಡದೊಂದಿಗೆ ಪೊಲೀಸ್ ಠಾಣೆಗೆ ಹಾಜರಾಗಿರುವ ಘಟನೆ ನಡೆದಿದೆ.‌

ಈ ಆಘಾತಕಾರಿ ಘಟನೆ ತಮಿಳುನಾಡಿನ ಕಲ್ಲಕುರುಚಿಯಲ್ಲಿ ಬೆಳಕಿಗೆ ಬಂದಿದೆ. ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಕೊಲೆ ಮಾಡಿ ಪತಿ, ರುಂಡಗಳೊಂದಿದೆ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ 

ಮರಕಡಿಯುವ ಕೆಲಸ ಮಾಡುವ ಕೊರಂಜಿ ಎಂಬಾತ ತನ್ನ ಪತ್ನಿ ಲಕ್ಷ್ಮಿಗೆ ತಂಗರಸು ಎಂಬಾತನೊಂದಿಗೆ ಅಕ್ರಮ ಸಂಬಂಧ ವಿದೆ ಎಂದು ಶಂಕಿಸಿ ಇಬ್ಬರನ್ನೂ ಹತ್ಯೆ ಮಾಡಿದ್ದಾನೆ.

ಕೆಲಸವಿದೆ ಹೊರಗಡೆ ಹೋಗಬೇಕು. ಬರುವುದು ತುಂಬಾ ತಡವಾಗುತ್ತದೆ ಎಂದು ಪತ್ನಿಗೆ ಹೇಳಿ ಕೊರಂಜಿ ಮನೆಯಿಂದ ಹೋಗಿದ್ದ. ಹೀಗೆ ಹೋದವನು ಕೆಲ ಸಮಯದಲ್ಲೇ ಮನೆಗೆ ವಾಪಾಸ್ ಆಗಿದ್ದಾನೆ. 

Home add -Advt

ಈ ವೇಳೆ ಮನೆಯ ಟೆರೇಸ್ ಮೇಲೆ ಪತ್ನಿ ಲಕ್ಷ್ಮೀ ಹಾಗೂ ತಂಗರಸು ಜೊತೆಗಿರುವುದು ಗೊತ್ತಾಗಿದೆ. ಇದರಿಂದ ಇನ್ನಷ್ಟು ಅನುಮಾನಗೊಂಡು ಇಬ್ಬರನ್ನೂ ಕೊಡಲಿಯಿಂದ ಕೊಚ್ಚಿ ಕೊಲೆಮಾಡಿದ್ದಾನೆ. ಬಳಿಕ ಎರಡೂ ರುಂಡಗಳನ್ನು ಹಿಡಿದು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.

Related Articles

Back to top button