Kannada NewsKarnataka NewsLatest

*ದಸರಾ ಸಂಭ್ರಮ: ಈ ದಿನ ನಡೆಯಲಿದೆ ಏರ್ ಶೋ*

ಪ್ರಗತಿವಾಹಿನಿ ಸುದ್ದಿ: ಈ ಬಾರಿಯ ಮೈಸೂರು ದಸರಾದಲ್ಲಿ ಏರ್ ಶೋ ನಡೆಸಲಾಗುತ್ತಿದ್ದು, ಯಾವಾಗಿಂದ ಆರಂಭ ಆಗುತ್ತೆ ಎಂದು ಕುತೂಹಲ ಇತ್ತು.‌ ಆದರೆ ಇದೀಗ ದಿನಾಂಕ ನಿಗದಿ ಮಾಡಲಾಗಿದೆ. 

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಸೆಪ್ಟೆಂಬರ್ 27 ಮತ್ತು ಅಕ್ಟೋಬರ್ 1ರಂದು ರೋಮಾಂಚನಕಾರಿ ಏರ್ ಶೋ ಪ್ರದರ್ಶನ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.

ಸೆ. 22ರಂದು ಫಲಪುಷ್ಪ ಪ್ರದರ್ಶನ ನಡೆಯಲಿದೆ. ಸೆಪ್ಟೆಂಬರ್ 23ರಂದು ಉತ್ತನಹಳ್ಳಿಯ ಸಮೀಪ ಯುವ ದಸರಾಗೆ ಚಾಲನೆ ನೀಡಲಾಗುವುದು. 

ಸೆಪ್ಟೆಂಬರ್ 28, 29, ಅಕ್ಟೋಬರ್ 1. 2 ರಂದು ಬನ್ನಿ ಮಂಟಪದಲ್ಲಿ 3000 ದ್ರೋಣ್ ಗಳ ಹಾರಾಟವಿರುತ್ತದೆ. ಡೋನ್ ಶೋ ಮತ್ತು ಏ‌ರ್ ಶೋ ಗೆ ಪಾಸ್ ವ್ಯವಸ್ಥೆ ಇರಲಿದೆ ಎಂದು ಹೇಳಿದ್ದಾರೆ.’

Home add -Advt

Related Articles

Back to top button