
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ: ಗುರ್ಲಾಪುರ ಕ್ರಾಸ್ ಬಳಿ ಟಾಟಾ ಏಸ್ ಮತ್ತು ದ್ವಿ ಚಕ್ರ ವಾಹನಗಳ ನಡುವೆ ಅಪಘಾತದಲ್ಲಿ ಚಿಕ್ಕೋಡಿಯ ವಿಜಯ ಕರ್ನಾಟಕ ವರದಿಗಾರ ವಿರೂಪಾಕ್ಷ ಕವಟಗಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಶುಕ್ರವಾರ ಮಧ್ಯಾಹ್ನ ಅಪಘಾತ ಸಂಭವಿಸಿದೆ. ತೀವ್ರ ಗಾಯಗೊಂಡ ವಿರೂಪಾಕ್ಷ ಕವಟಗಿ ಅವರನ್ನು ಚಿಕ್ಕೋಡಿಯ ಆಸ್ಪತ್ರೆಗೆ ದಾಖಲಾಗಿತ್ತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿದೆ.