
ಪ್ರಗತಿವಾಹಿನಿ ಸುದ್ದಿ: 18ನೇ ಆವೃತ್ತಿಯ ಐಪಿಎಲ್ ನಲ್ಲಿ ಚಾಂಪಿಯನ್ಸ್ ಆಗಿ ಹೊರ ಹೊಮ್ಮಿದ ಆರ್.ಸಿ.ಬಿ ಮೊದಲ ಬಾರಿಗೆ ಕಪ್ ತನ್ನದಾಗಿಸಿಕೊಂಡೊತು. ತಂಡದ ಮಾಲೀಕತ್ವ ಹೊಂದಿರುವ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಫ್ರಾಂಚೈಸಿಯನ್ನು ಮಾರಾಟಕ್ಕೆ ಇಟ್ಟಿದೆ ಎನ್ನಲಾಗುತ್ತಿದೆ.
ಜಗತ್ತಿನಲ್ಲೆ ಅತೀ ಹೆಚ್ಚು ಕ್ರಿಕೆಟ್ ಫ್ಯಾನ್ಸ್ ಹೋಂದಿರುವ ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡ ಐಪಿಎಲ್ ಸೀಸನ್ 18 ರ ಚಾಂಪಿಯನ್ಸ್ ಪ್ರಪಂಚದ ಅತ್ಯಂತ ಜನಪ್ರಿಯ ಫ್ರಾಂಚೈಸಿಗಳ ಪೈಕಿ ಒಂದಾಗಿದೆ. ಸದ್ಯ ತಂಡದ ಮಾಲೀಕತ್ವ ಹೊಂದಿರುವ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಫ್ರಾಂಚೈಸಿಯನ್ನ ಮಾರಾಟಕ್ಕೆ ಇಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದರ್ ಪೂನಾವಾಲಾ ಅವರು ಫ್ರಾಂಚೈಸಿಯಲ್ಲಿ USL ನ ಸಂಪೂರ್ಣ ಪಾಲನ್ನು ಖರೀದಿಸಲು ಮುಂಚೂಣಿಯಲ್ಲಿದ್ದಾರೆ ಎನ್ನಲಾಗಿದೆ. 52 ಬಿಲಿಯನ್ ಅಥವಾ 17,762 ಕೋಟಿ ಮೌಲ್ಯಕ್ಕೆ ಫ್ರಾಂಚೈಸಿ ಬಿಕರಿಯಾಗಲಿದೆ ಎನ್ನಲಾಗುತ್ತಿದೆ.