
ಪ್ರಗತಿವಾಹಿನಿ ಸುದ್ದಿ: ದೀಪಾವಳಿಗೂ ಮುನ್ನ ಜಿಎಸ್ಟಿ ಪ್ರಮಾಣ ಇಳಿಕೆ ಮಾಡಲಾಗುವುದು ಎಂದು ರಾಜ್ಯ ಪ್ರವಾಸ ಕೈಗೊಂಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸಿತಾರಾಮ ತಿಳಿಸಿದರು.
ಕೊಪ್ಪಳದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜಿಎಸ್ ಟಿ ಕೌನ್ಸಿಲ್ ನಿಂದ ಹೊಸ ನೀತಿ ಜಾರಿಯಾಗಿದೆ. ಇದೀಗ ಜಿಎಸ್ ಟಿ ಸುಧಾರಣೆಯಾಗಿದೆ. ಬಹಳಷ್ಟು ಉತ್ಪಾದನೆಗಳ ಮೇಲೆ ಜಿಎಸ್ ಟಿ ಕಡಿಮೆ ಆಗಿದೆ. ರೈತರ ಹಾಗೂ ಕೃಷಿ ಸಲಕರಣೆಗಳ ಮೇಲೆ ಜಿಎಸ್ ಟಿ ದರ ಕಡಿಮೆ ಆಗಿದೆ. ಬಯೋ ಉತ್ಪಾದನೆಗಳ ಮೇಲೂ ಜಿಎಸ್ ಟಿ ಕಡಿಮೆ ಆಗಿದೆ. ಮೈಕ್ರೋ ಉತ್ಪಾದನಾ ಯುನಿಟ್ ಗಳಿಗೆ ಉತ್ತೇಜನ ನೀಡಲಾಗಿದೆ. ಮೈಕ್ರೋ ಉತ್ಪಾದನಾ ಯುನಿಟ್ ಗಳಿಗೆ ಉತ್ತೇಜನ ನೀಡಲಾಗಿದೆ ಎಂದರು
ಕೃಷಿ ಸಂಸ್ಕರಣಾ ತರಬೇತಿ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರ ಉದ್ಘಾಟಿಸಿ ಬಳಿಕ ಮಾತನಾಡಿ,ಇಲ್ಲಿಯ ಮಾವು, ಪೇರಲ, ಅಂಜೂರ ಸೇರಿ ವಿವಿಧ ಹಣ್ಣು ಸಂಸ್ಕರಣೆ, ರೈತ ಕಂಪನಿಗಳಿಂದ ತಯಾರಿಸಿದ ವಸ್ತುಗಳ ವೀಕ್ಷಣೆ, ರೈತರು ಉತ್ಪಾದಿಸುವ ವಸ್ತುಗಳ ಮೌಲ್ಯವರ್ಧನೆಯ ಬಗ್ಗೆ ಸಲಹೆ ನೀಡಿದರು. ಇನ್ನು ದೀಪಾವಳಿಯ ಮುನ್ನ ಜಿಎಸ್ಟಿ ಪ್ರಮಾಣ ಇಳಿಕೆ ಮಾಡಲಾಗುವುದು, ಈ ಹಿಂದೆ ಇದ್ದ 12 ರಷ್ಟನ್ನು ಈಗ 5 ರಷ್ಟು ಇಳಿಕೆ ಮಾಡಲಾಗುವುದು, ಬಯೋ ಪ್ರಾಡಕ್ಟ್ ಗಳಿಗೆ ಜಿಎಸ್ಪಿ ಕಡಿಮೆ ಮಾಡಲಾಗುವುದು, ಪಿಎಂಎಫ್‌ಎಂಇ 2020 ರಲ್ಲಿ ಆರಂಭವಾಗಿದೆ. ಮೌಲ್ಯವರ್ಧನೆ ವಸ್ತುಗಳಿಗೆ ಕೇಂದ್ರ ಸರಕಾರ ಹಣಕಾಸು ಹಾಗು ತರಬೇತಿ ನೀಡಲಾಗುವುದು ಎಂದರು.
ಕೇಂದ್ರ ಸರಕಾರ ಪ್ರಧಾನ ಮಂತ್ರಿಗಳು ದೇಶದ 100 ಜಿಲ್ಲೆಯಲ್ಲಿ ಧನ್ ಧಾನ್ಯ ಯೋಜನೆ ಜಾರಿ ಮಾಡಿದ್ದಾರೆ ಅದರಲ್ಲಿ ಕೊಪ್ಪಳ ಜಿಲ್ಲೆಯೂ ಸೇರಿದೆ. ಈ ಯೋಜನೆಯಿಂದ ಗುಣಮಟ್ಟದ ಬೀಜ, ತಾಂತ್ರಿಕ ಹಾಗು ಸಹಜ ಕೃಷಿಗೆ ಮಾಹಿತಿ ನೀಡಲಾಗುವುದು, ನೀರಾವರಿ ಸೌಲಭ್ಯ ಸುಧಾರಣೆಯಾಗಲಿದೆ ಮಾರುಕಟ್ಟೆ ಸಂಪರ್ಕ ಇನ್ನೂ ಸುಲಭವಾಗುತ್ತದೆ.
ನನಗೆ ಕೊಪ್ಪಳದಲ್ಲಿ ಒಂದು ಸುವರ್ಣ ಅವಕಾಶ ಸಿಕ್ಕಿದೆ. ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಿಗೆ ರೈತರ ತರಬೇತಿ ಕೇಂದ್ರಗಳ ಮಾಡಲು ಹಣ ನೀಡುರುವೆ. ಉತ್ತಮ ಬೆಳೆ, ಬೆಳೆಯನ್ನು ಪ್ಯಾಕೇಜ್ ಮಾಡುವುದು, ಅದಕ್ಕೆ ಉತ್ತಮ ಮಾರುಕಟ್ಟೆ ಒದಗಿಸುವುದು, ಇದಕ್ಕೆ ನಬಾರ್ಡ್ ಸಂಸ್ಥೆ ನಮಗೆ ಕೈಜೋಡಿಸಿದೆ.
ನಮ್ಮಸರ್ಕಾರದಿಂದ ನಾವು ಹಣ ಕೊಡುತ್ತೇವೆ, ಆದರೆ ನಬಾರ್ಡ್ ಸಹ ನಮ್ಮೊಂದಿಗೆ ಕೈಜೋಡಿಸಿದೆ. ರೈತರಿಗೆ ತರಬೇತಿ ನೀಡಲು ಮುಂದಾಗಿದೆ. ಹೀಗಾಗಿ ಕೊಪ್ಪಳ ಅಕ್ಷಯಪಾತ್ರೆ ಎಂದು ಕರೆಸಿಕೊಳ್ಳುತ್ತೆ 100 ಯುನಿಟ್ ನಲ್ಲಿ 10 ಯುನಿಟ್ ಅಕ್ಕಿ ಕೊಪ್ಪಳದಲ್ಲಿ ಉತ್ಪಾದನೆ ಆಗುತ್ತೆ, ವಿವಿಧ ಬಗೆಯ ಹಣ್ಣು ದವಸ ಧಾನ್ಯಗಳನ್ನು ಇಲ್ಲಿ ಬೆಳೆಯಲಾಗುತ್ತೆ ಇವುಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗಬೇಕು, ಹಾಗಾಗಿ ಇದನ್ನು ಉತ್ತೇಜನ ಮಾಡಲು ನಮ್ಮ ಸರ್ಕಾರ ಮುಂದಾಗಿದೆ.
ಮಳೆ ಆಗದಿದ್ದರೆ ಇಲ್ಲಿನ ಜನರು ಗುಳೆ ಹೋಗುತ್ತಾರೆ. ಈ ಕಾರಣಕ್ಕೆ ರೈತರು ಗ್ರಾಮಗಳನ್ನು ತೊರೆಯದಂತೆ, ಈ ವ್ಯಾಲೂ ಎಡಿಷನ್ ಯೋಜನೆಗೆ ಮುಂದಾಗಿದ್ದೇವೆ, ಈ ರೈತರ ತರಬೇತಿ ಕೇಂದ್ರ ಸಾವಿರಾರು ರೈತರಿಗೆ ಅನುಕೂಲ ಆಗುತ್ತದೆ. ಮಾರುಕಟ್ಟೆಯಲ್ಲಿ ಉತ್ತವ ದರ ಸಿಗುತ್ತೆ ಮೌಲ್ಯ ವರ್ಧನೆಯಿಂದ ಹೆಚ್ಚಿನ ಲಾಭ ಸಿಗುತ್ತೆ ಹಣ್ಣು ತರಕಾರಿಗಳಿಂದ ವಿವಿಧ ಉತ್ಪಾದನೆಗಳನ್ನು ಮಾಡಬಹುದು. FSSI ಕೂಡ ಈ ಘಟಕಕ್ಕೆ ಸಿಕ್ಕಿದೆ.ಇದರಿಂದ ಗುಣಮಟ್ಟದ ಉತ್ಪಾದನೆಗಳನ್ನು ಇಲ್ಲಿಂದ ಮಾಡಲಾಗುತ್ತೆ, ಈ ವೇಳೆ ಪ್ರಧಾನಿ ಅವರ ವೋಕಲ್ ಫಾರ್ ಲೋಕಲ್ ಬಗ್ಗೆ ಹೇಳಿ, ಕೊಪ್ಪಳಕ್ಕೆ ಲೋಕಲ್ ಉತ್ಪಾದನೆಗೆ ವೋಕಲ್ ಸಿಗುತ್ತೆ ಕರ್ನಾಟಕದಲ್ಲಿ ಕಿಸಾನ್ ಸಮ್ಮಾನ್ ಯೋಜನೆಯಿಂದ 43 ಲಕ್ಷ ರೈತರು ಪಡೆಯುತ್ತಿದ್ದಾರೆ.
ಹಣಕಾಸು ಹಾಗೂ ತಂತ್ರಜ್ಞಾನ ಸೌಲಭ್ಯ ಹಾಗೂ ಬ್ರಾಂಡ್ ಮಾರುಕಟ್ಟೆಯನ್ನು ರೂಪಿಸಲಾಗಿದೆ. ನೀರಾವರಿ ಸೌಲಭ್ಯ ಸುಧಾರಣೆ ಆಗುತ್ತದೆ. ಇಂತಹ ರೈತ ತರಬೇತಿ ಕೇಂದ್ರದಿಂದ ಸಹಕಾರಿ. ಆಗಲಿದೆ. ಇದನ್ನು ತಾವೆಲ್ಲ ಸದುಪಯೋಗ ಪಡೆಯಿರಿ ಎಂದರು. ಕೊಪ್ಪಳ ಉತ್ತಮ ಕೃಷಿ ಹಬ್ ಆಗಲಿದೆ ಎಂದರು.
ನಾನು ಕರ್ನಾಟಕದಿಂದ ಆಯ್ಕೆಯಾಗಿದ್ದೇನೆ, ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳಲ್ಲಿ ಒಂದೊಂದು ರೈತರಿಗೆ ಉಪಯೋಗವಾಗುವ ಯೋಜನೆ ಆರಂಭಿಸಲಾಗಿದೆ. ರೈತರಿಗೆ ಉತ್ಪಾದನೆಯ ಮೌಲ್ಯವರ್ಧಿತರ ತರಬೇತಿ ನೀಡಲಾಗುವುದು ಎಂದರು.