Kannada NewsNationalPolitics

*ಲ್ಯಾಂಡಿಂಗ್ ವೇಳೆ ಎಡವಟ್ಟು: ನೆಲದಲ್ಲಿ ಹೂತುಹೋದ ರಾಷ್ಟ್ರಪತಿ ಮುರ್ಮು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಚಕ್ರ*

ಪ್ರಗತಿವಾಹಿನಿ ಸುದ್ದಿ: ರಾಷ್ಟ್ರಪತಿ ದ್ರೌಪದಿ ಮುರ್ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಮಣ್ಣಿನಲ್ಲಿ ಚಕ್ರ ಹೂತ ಘಟನೆ ನಡೆದಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಶಬರಿಮಲೆಗೆ ಭೇಟಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾರತೀಯ ವಾಯುಸೇನೆ ಎಂಐ-17 ಹೆಲಿಕಾಪ್ಟರ್ ನಲ್ಲಿ ತಿರುವನಂತಪುರಂನಿಂದ ತೆರಳಿದ್ದರು. ಬೆಳಿಗ್ಗೆ ಪ್ರಮಾಡಂ ಇನ್ ಡೋರ್ ಸ್ಟೇಡಿಯಂ ನಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಹೆಲಿಕಾಪ್ಟರ್ ಚಕ್ರ ನೆಲದಲ್ಲಿ ಹೋತು ಹೋಗಿ ಅವಾಂತರ ಸೃಷ್ಟಿಯಾಗಿದೆ.

Home add -Advt

ಬಳಿಕ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹೆಲಿಕಾಪ್ಟರ್ ತಳ್ಳಿ ಬದಿಗೆ ಸರಿಸಿದ್ದಾರೆ. ರಾಷ್ಟ್ರಪತಿಗಳು ರಸ್ತೆ ಮಾರ್ಗವಾಗಿ ಪ್ರಯಾಣ ಮುಂದುವರೆಸಿದ ಘಟನೆ ನಡೆದಿದೆ.

ಪೂರ್ವ ನಿಗದಿ ಪ್ರಕಾರ ರಾಷ್ಟ್ರಪತಿಗಳು ನೀಲಕ್ಕಲ್ ನಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಹವಾಮಾನ ವೈಪರೀತ್ಯದಿಂದಾಗಿ ಪ್ರಮಾಡಂ ಇನ್ ಡೋರ್ ಸ್ಟೇಡಿಯಂ ನಲ್ಲಿ ಲ್ಯಾಂಡಿಂಗ್ ಮಾಡಬೇಕಾಯಿತು. ಹಾಗಾಗಿ ತರಾತುರಿಯಲ್ಲಿ ಹೆಲಿಪ್ಯಾಡ್ ನಿರ್ಮಿಸಿದ್ದರಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ.

Related Articles

Back to top button