CrimeKannada NewsKarnataka News

*ಕೊಲೆಯಾದ ವ್ಯಕ್ತಿಯ ಬರ್ತ್​ಡೇ ದಿನವೇ ಹಂತಕರಿಗೆ​ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್*

ಪ್ರಗತಿವಾಹಿನಿ ಸುದ್ದಿ: 2018 ಜೂನ್​ನಲ್ಲಿ ನಡೆದಿದ್ದ ಪಾಟ್ನಾ ಮೂಲದ ಸಿದ್ಧಾರ್ಥ ಕೊಲೆ ಪ್ರಕರಣ ಸಂಬಂಧ ಮಹತ್ವದ ತೀರ್ಪುವನ್ನು ಮೃತನ ಹುಟ್ಟು ಹಬ್ಬದ ದಿನವೇ ಬೆಂಗಳೂರಿನ ಸಿಸಿಹೆಚ್​ 59ನೇ ನ್ಯಾಯಾಲಯ ಪ್ರಕಟಿಸಿದೆ. ಪ್ರಕರಣದ ಅಪರಾಧಿಗಳಿಗೆ ಜೀವಾವದಿ ಶಿಕ್ಷೆ ವಿಧಿಸಿದೆ. 

2018ರ ಜೂನ್ 26ರಂದು, ಸಿದ್ಧಾರ್ಥ್ ತಮ್ಮ ಸ್ನೇಹಿತರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ರಾತ್ರಿ 2.45ರ ಸುಮಾರಿಗೆ, ಮೂತ್ರ ವಿಸರ್ಜನೆ ಮಾಡಲು ಕಾರು ನಿಲ್ಲಿಸಿದಾಗ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅವರನ್ನು ಉದ್ದೇಶಪೂರ್ವಕವಾಗಿ ಬೈಕ್‌ನಿಂದ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳವಾಗಿದ್ದು, ಆರೋಪಿಗಳು ಸಿದ್ದಾರ್ಥ್​ಗೆ ದೊಣ್ಣೆಯಿಂದ ಹೊಡೆದು ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾದರೂ ಚಿಕಿತ್ಸೆ ಫಲಿಸದೆ ಸಿದ್ದಾರ್ಥ್​ ಜೂನ್ 28, 2018 ರಂದು ಮೃತಪಟ್ಟಿದ್ದರು. 

Home add -Advt

ಘಟನೆ ಬಳಿಕ ಆರೋಪಿಗಳಾದ ಗಿರೀಶ್ ಮತ್ತು ಮಹೇಶ್ ಎಂಬವರನ್ನ ಮೈಕೋಲೇಔಟ್​​ ಠಾಣೆ ಪೊಲೀಸರು​ ಬಂಧಿಸಿದ್ದು, ತನಿಖೆ ನಡೆಸಿ ಕೋರ್ಟ್​ಗೆ ಚಾರ್ಜ್​ಶೀಟ್ ಸಲ್ಲಿಸಿದ್ದರು. 

ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಲಯ ಕೊಲೆಯಾಗಿರುವ ಸಿದ್ಧಾರ್ಥ್​ ಜನ್ಮದಿನವಾದ ಅಕ್ಟೋಬರ್​ 24ರಂದೇ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ. ಜೊತೆಗೆ 10 ಸಾವಿರ ರೂ.ಗಳನ್ನ ಮೃತನ ತಂದೆಗೆ ಪಾವತಿಸಲು ನ್ಯಾಯಾಲಯ ಸೂಚಿಸಿದೆ.

Related Articles

Back to top button