*ಕಿತ್ತೂರು ಹೆದ್ದಾರಿ ಬಳಿ ಮದ್ಯದಂಗಡಿಗೆ ನಿವಾಸಿಗಳ ವಿರೋಧ: ಉಗ್ರ ಹೋರಾಟದ ಎಚ್ಚರಿಕೆ*

ಪ್ರಗತಿವಾಹಿನಿ ಸುದ್ದಿ: ಚನ್ನಮ್ಮನ ಕಿತ್ತೂರು : ಚನ್ನಮನ ಕಿತ್ತೂರಿನ ರಾಷ್ಟ್ರೀಯ ಹೆದ್ದಾರಿ ಸರ್ವಿಸ ರಸ್ತೆಯ 17ನೇ ವಾರ್ಡನಲ್ಲಿ (msil) ಮದ್ಯದಂಗಡಿಯನ್ನು ತೆರೆಯಲು ಮುಂದಾಗಿರುವುದನ್ನು ವಿರೋಧಿಸಿ ನಿವಾಸಿಗಳು ಪಟ್ಟಣ ಪಂಚಾಯತಿ ಅಧ್ಯಕ್ಷ ಜಯಸಿದ್ದರಾಮ ಮಾರಿಹಾಳ, ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠ ಅವರಿಗೆ ಗುರುವಾರ ಮನವಿ ಪತ್ರ ಸಲ್ಲಿಸ್ದರು.
ಪಟ್ಟಣದ 17ನೇ ವಾರ್ಡ್ ನ ನಿವಾಸಿಗಳು, ಇಲ್ಲಿ ಮದ್ಯದಂಗಡಿ ತೆರೆಯದಂತೆ ಆಗ್ರಹಿಸಿದ್ದಾರೆ. ಐತಿಹಾಸಿಕ ತುಂಬಗೇರಿ ಕೆರೆಯ ಹತ್ತಿರ ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆ ಪಕ್ಕದಲ್ಲಿ ಮತ್ತು ಹೊಸಾ ಚನ್ನಾಪೂರಕ್ಕೆ ಗ್ರಾಮಕ್ಕೆ ತೆರಳುವ ರಸ್ತೆಗೆ ಹೊಂದಿಕೊಂಡು (MSIL) ಮದ್ಯದಂಗಡಿ ತೆರೆಯಲು ಈಗಾಗಲೇ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ್ದಾರೆ. ಇದಕ್ಕೆ ಕಿತ್ತೂರು ಪಟ್ಟಣದ ನಿವಾಸಿಗಳು, ಹೊಸಾ ಚನ್ನಾಪುರ, ಗಿರಿಯಾಲ ಗ್ರಾಮದ ನಿವಾಸಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಕಾರಣ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವಿಸ್ ರಸ್ತೆ ಇಕಟ್ಟಾಗಿದ್ದು ಇಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗಿವೆ. ಅಲ್ಲದೆ ಈ ಹಿಂದೆ ಈ ರಸ್ತೆಯಲ್ಲಿ ಅಪಘಾತಗಳು ಸಂಭವಿಸಿ ಹಲವರು ಸಾವಿಗೀಡಾದ ಉದಾಹರಣೆಗಳು ಸಹ ಇವೆ. ಇದನ್ನು ಖಂಡಿಸಿ ಹಲವು ಪ್ರತಿಭಟನೆಗಳು ಸಹ ನಡೆದಿವೆ. ಈ ರಸ್ತೆಯ ಮೂಲಕ ದಿನನಿತ್ಯ ಸಾರಿಗೆ ಬಸ್, ಲಾರಿ ಸೇರಿದಂತೆ ಸಾವಿರಾರು ವಾಹನಗಳು ಸಂಚರಿಸುತ್ತವೆ. . ಈಗ ಇಲ್ಲಿ ಮದ್ಯದಂಗಡಿಯನ್ನು ತೆರೆಯುವುದರಿಂದ ಅಪಘಾತಗಳು ಇನ್ನಷ್ಟು ಹೆಚ್ಚಲಿವೆ. ಅಲ್ಲದೆ ಈ ರಸ್ತೆಯಲ್ಲಿ ಶಾಲಾ- ಕಾಲೇಜು ವಿದ್ಯಾರ್ಥಿಗಳು ಚಿಕ್ಕ ಮಕ್ಕಳು, ವೃದ್ಧರು, ಸ್ತ್ರೀಯರು, ನಾಗರಿಕರು ಹೆಚ್ಚಾಗಿ ಸಂಚರಿಸುತ್ತಾರೆ. ಈ ಸ್ಥಳಗಳು ಜನವಸತಿ ಪ್ರದೇಶವಾಗಿದೆ. ಇಲ್ಲಿ (MSIL) ಅಂಗಡಿಯನ್ನು ತೆರೆದರೆ ನಿವಾಸಿಗಳಿಗೆ ತೊಂದರೆಯಾಗುತ್ತದೆ.
ಈ ಹಿಂದೆ ಸೋಮವಾರ ಪೇಟೆಯಲ್ಲಿ ಇದೇ ಸಮಸ್ಯೆಯಿಂದಾಗಿ ಮದ್ಯದಂಗಡಿಯನ್ನು ಬಂದ್ ಮಾಡಲಾಗಿತ್ತು. ಆದರೂ ಸಹ ಮತ್ತೆ ಜನವಸತಿ ಪ್ರದೇಶದಲ್ಲಿ ಮದ್ಯದಂಗಡಿ ತೆರೆಯಲು ಮುಂದಾಗಿರುವುದು ಖಂಡನೀಯ. ಸಾರ್ವಜನಿಕ ಹಿತಾಸಕ್ತಿಯನ್ನು ಪರಿಗಣಿಸಿ ಮದ್ಯದಂಗಡಿಗೆ ಅನುಮತಿ ರದ್ದು ಮಾಡುವಾಂತೆ ಒತ್ತಿಸಿದ್ದಾರೆ.
ಒಂದು ವೇಳೆ ಇದನ್ನೂ ಮೀರಿ, ಅಲ್ಲಿ ಸಾರಾಯಿ (MSIL) ಅಂಗಡಿಗೆ ಪರವಾನಗಿ ನೀಡಿದ್ದೇ ಆದರೆ, ಇಲ್ಲಿಯ ಸೋಮವಾರ ಪೇಟೆಯಲ್ಲಿ ಮಾಡಿದಂತೆ ಈ ಪ್ರದೇಶದ ನಿವಾಸಿಗಳೆಲ್ಲರೂ ಕೂಡಿ ಧರಣಿ ನಡೆಸಿ ಅದನ್ನು ಮುಚ್ಚಿಸುವವರೆಗೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಮುಖ್ಯಾಧಿಕಾರಿ ಮಲ್ಲಯ ಹಿರೇಮಠ ಮಾತನಾಡಿ, ಈಗಾಗಲೇ ಎಂ.ಎಸ್.ಐ.ಎಲ್ ಮದ್ಯದಂಗಡಿ ತೆರೆಯಲು ಎನ್.ಓ.ಸಿ ನೀಡಲಾಗಿದೆ. ಹಾಗಾಗಿ ಅಬಕಾರಿ ಇಲಾಖೆಯವರ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಈ ವೇಳೆ ಕಿರಣ ವಾಲಿಕಾರ, ಕೆಂಚ್ಚಪ್ಪ ಗುಡಾಕಾರ, ಮಹೇಶ ಭಂಡಾರಿ, ಬಾಬು ಹುಲಮನಿ, ನಾಜೀಲ್ ಬೆಳವಡಿ, ಅಡವಯ್ಯ ಹಿರೇಮಠ, ದೀಪಕ ಪೈ, ಈರಣ್ಣ ವಕ್ಕುಂದ, ಶೋಭಾ ದರ್ಶಿ, ಶಿಲ್ಪಾ ಪೈ, ಪಾರ್ವತಿ ಬಡಿಗೇರ, ಹೆಮಲತಾ ಶೆಟ್ಟಿ, ವಾಸು ನಾಯ್ಕ, ಚಂದ್ರಯ್ಯ ಹಿರೇಮಠ, ದುರ್ಗಪ್ಪ ದೇವಗಿರಿ, ರಮೇಶ ಕಲ್ಲವಡ್ಡರ, ನಬೀ ಅತ್ತಾರ, ಸಲಿಂ ಬೆಳವಡಿ ಸೇರಿದಂತೆ ನಿವಾಸಿಗಳು ಉಪಸ್ಥಿತರಿದ್ದರು.



