Belagavi NewsBelgaum NewsKannada NewsKarnataka NewsPolitics
*ಲಕ್ಷ್ಮೀ ತಾಯಿ ಫೌಂಡೇಶನ್ ನಿಂದ ಆರ್ಥಿಕ ನೆರವು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಮಾರಿಹಾಳ ಗ್ರಾಮದ ಬಾಲಕಿಗೆ ಲಕ್ಷ್ಮೀ ತಾಯಿ ಫೌಂಡೇಶನ್ ವತಿಯಿಂದ ಆರ್ಥಿಕ ನೆರವು ನೀಡಲಾಯಿತು.
ನಾಗರತ್ನ ಫಕೀರಪ್ಪ ಬಳ್ಳೊಡಿ ಇವರ 5 ವರ್ಷದ ಪುಟ್ಟ ಮಗ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಆರ್ಥಿಕ ನೆರವಿನ ಅಗತ್ಯವಿದ್ದ ಕಾರಣ ಪುಟ್ಟ ಕಂದನ ನೋವಿಗೆ ಸ್ಪಂದಿಸಿ, ಲಕ್ಷ್ಮೀ ತಾಯಿ ಫೌಂಡೇಶನ್ ವತಿಯಿಂದ ಕುಟುಂಬಕ್ಕೆ ವಿಧಾ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಚೆಕ್ ವಿತರಿಸಿದರು.
ಮಗುವಿನ ಹೆಚ್ಚಿನ ಚಿಕಿತ್ಸೆಗಾಗಿ ನಾವಿದ್ದೇವೆ ಎಂಬ ಭರವಸೆಯೊಂದಿಗೆ ಪೋಷಕರಿಗೆ ಧೈರ್ಯ ತುಂಬಿದರು. ಆ ಪುಟ್ಟ ಕಂದ ಶೀಘ್ರವಾಗಿ ಗುಣಮುಖನಾಗಲಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಪ್ರಾರ್ಥಿಸಿದ್ದಾರೆ.


