Belagavi NewsBelgaum NewsCrimeKannada NewsKarnataka News

*ಬೆಳಗಾವಿಯಲ್ಲಿ ತಮಿಳುನಾಡಿನ ಮಹಿಳೆ ಮತ್ತು ಮಗು ನಾಪತ್ತೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ನಿವಾಸಿವಾದ 36 ವರ್ಷ ವಯಸ್ಸಿನ ರೋಬಿನಾ ಜೈನುಲ್ಲಾಅಬೇದ್ದಿನ ಸಯ್ಯದ ಎಂಬ ಮಹಿಳೆಯು ಕೆಲಸಕ್ಕಾಗಿ ಖಾನಾಪೂರದ ಸಮಾದೇವಿ ಗಲ್ಲಿಯಲ್ಲಿ ವಾಸವಾಗಿದ್ದು, 4 ವರ್ಷ ವಯಸ್ಸಿನ ಮಗ ಅಲಿಖಾಸಿಂ ಜೈನುಲ್ಲಾಅಬೇದ್ದಿನ ಸಯ್ಯದ ವೊಂದಿಗೆ ಕಾಣೆಯಾಗಿದ್ದಾರೆ ಎಂದು ಖಾನಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಣೆಯಾದ ಮಹಿಳೆಯು 4.11 ಅಡಿ ಎತ್ತರ, ಕಪ್ಪು ಕೂದಲು, ಸಾದಾಗಪ್ಪು ಮೈಬಣ್ಣ, ಸಡಪಾತಾಳ ಮೈಕಟ್ಟು, ಉದ್ದ ಮುಖ, ಮೊಂಡ ಮೂಗು, ತಮಿಳು, ಹಿಂದಿ, ಉರ್ದು, ಕನ್ನಡ ಭಾಷೆ ಮಾತನಾಡುತ್ತಾಳೆ. ಮರೂನ್ ಬಣ್ಣದ ಚೂಡಿದಾರ ಹಾಗೂ ಕಪ್ಪು ಬಣ್ಣದ ಪೈಜಾಮ್ ಧರಿಸಿರುತ್ತಾಳೆ. ಮಗ ಅಲಿಖಾಸಿಂ ಜೈನುಲ್ಲಾಅಬೇದ್ದಿನ ಸಯ್ಯದ 3.2 ಅಡಿ ಎತ್ತರ, ಕಪ್ಪು ಕೂದಲು, ಸಾಧಾ ಮೈಬಣ್ಣ, ಸಡಪಾತಾಳ ಮೈಕಟ್ಟು, ಗುಂಡ ಮುಖ, ಮಾತನಾಡಲು ಬರುವುದಿಲ್ಲ, ಬಿಳಿ ಬಣ್ಣದ ಉದ್ದ ತೋಳಿನ ಶರ್ಟ ಬ್ರೌನ್ ಬಣ್ಣದ ಪ್ಯಾಂಟ್ ಧರಿಸಿದ್ದಾನೆ.

ಕಾಣೆಯಾದ ಮಹಿಳೆ ಮತ್ತು ಮಗುವಿನ ಬಗ್ಗೆ ಮಾಹಿತಿ ದೊರೆತಲ್ಲಿ ಖಾನಾಪೂರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಅಥವಾ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ: 8336222333, 9480804033 ಗೆ ಸಂಪರ್ಕಿಸಬಹುದಾಗಿದೆ ಎಂದು ಖಾನಾಪೂರ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button