
ಪ್ರಗತಿವಾಹಿನಿ ಸುದ್ದಿ: ಸರಗಳ್ಳರ ಅಟ್ಟಹಾಸಕ್ಕೆ ಮಹಿಳೆ ಬಲಿಯಾಗಿರುವ ಘಟನೆ ನಡೆದಿದೆ.
ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ಈ ಘಟನೆ ನಡೆದಿದೆ. ಇಂದು ಮುಂಜಾನೆ 5:30ರ ಸುಮಾರಿಗೆ ಮಹಿಳೆ ಮನೆ ಮುಂದೆ ಕಸ ಗುಡಿಸುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಕಳ್ಳರು ಮಹಿಳೆಯ ಕತ್ತಿಗೆ ಕೈಹಾಕಿ ಚಿನ್ನದ ಸರ ಎಗರಿಸಿದ್ದಾರೆ.
ಮಹಿಳೆಯನ್ನು ತಳ್ಲಿ ಕೆಳಗೆ ಕೆಡವಿ ಮಹಿಳೆಯ ಮುಖಕ್ಕೆ ಸ್ಪೇ ಮಾಡಿ ಹಲ್ಲೆ ನಡೆಸಿದ್ದಾರೆ. ಕೆಳಗೆ ಬಿದ್ದ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 45 ವರ್ಷದ ಜ್ಯೋತಿ ಕಳ್ಳರ ಅಟ್ಟಹಾಸಕ್ಕೆ ಬಲಿಯಾಗಿರುವ ಮಹಿಳೆ. ಮಹಿಳೆಯ ಮೂಗು ಹಾಗೂ ಕಿವಿಗಳಿಂದ ರಕ್ತ ಬಂದಿದೆ. ಮಹಿಳೆಯ ಕತ್ತಿನಲ್ಲಿದ್ದ 70 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಕದ್ದು ಕಳ್ಳರು ಪರಾರಿಯಾಗಿದ್ದಾರೆ.


