*ನೀರಾವರಿ ಯೋಜನೆ ಕುರಿತು ಎರಡು ದಿನದ ಕಾರ್ಯಾಗಾರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ದಿ ಇನ್ಸಿಟ್ಯೂಷನ್ ಆಫ್ ಇಂಜನೀಯರ್ಸ ಸ್ಥಳೀಯ ಕೇಂದ್ರ ಬೆಳಗಾವಿ ಹಾಗೂ ಜಲಸಂಪನ್ಮೂಲ ಇಲಾಖೆ ಇವರ ಸಹಯೋಗದಲ್ಲಿ ದಿನಾಂಕ 6-7 ಫೆಬ್ರುವರಿ 2026ರಂದು “ನೀರಾವರಿ ಯೋಜನೆಗಳು ಬದಲಾಗುತ್ತಿರುವ ಹವಾಮಾನ ಸನ್ನಿವೇಶದಲ್ಲಿ ಅವುಗಳ ಸುಸ್ಥಿರತೆ, ಚೇತರಿಕಾ ಸಾಮರ್ಥ್ಯ ಹಾಗೂ ಸನ್ನಿವೇಶಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯ” ದ ಕುರಿತು ಎರಡು ದಿನಗಳ ರಾಷ್ಟ್ರೀಯಮಟ್ಟದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಾಗಾರವನ್ನು ನೀರಾವರಿ ಇಲಾಖೆ ನಿವೃತ್ತ ಕಾರ್ಯದರ್ಶಿಗಳಾದ ಕೆ. ಜೈಪ್ರಕಾಶ ಹಾಗೂ ಐಜಾಝ ಹುಸೇನ್ ಉದ್ಘಾಟಿಸಿದರು. ನಿವೃತ್ತ ಮುಖ್ಯ ಇಂಜನೀಯರ ಮಾಧವ ಹಾಗೂ ಕರ್ನಾಟಕ ನೀರಾವರಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರದ ರಾಜೇಶ ಅಮ್ಮಿನಭಾವಿ ಗೌರವ ಅತಿಥಿಗಳಾಗಿ ಆಗಮಿಸಿದ್ದರು.
ಐ.ಇ.ಐ. ಚೇರಮನ್ ಸಿ. ಬಿ. ಹಿರೇಮಠ ಇವರು ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯ ಇಂಜನೀಯರ ಎಸ್. ಎಸ್. ಖನಗಾವಿ ಉಪಸ್ಥಿತರಿದ್ದರು.
ನಿಗದಿತ ವಿಷಯದ ಕುರಿತು ಅರವಿಂದ ಗಲಗಲಿ, ಡಾ. ರಾಜೇಂದ್ರ ಪೋದ್ಧಾರ, ಡಾ. ಶರತ್ ಜೋಶಿ ಸೇರಿದಂತೆ ಒಂಭತ್ತು ನುರಿತ ಸಂಪನ್ಮೂಲ ವ್ಯಕ್ತಿಗಳು ವಿವಿಧ ವಿಷಯಗಳ ಕುರಿತು ವಿಚಾರಗಳನ್ನು ಮಂಡಿಸಿದರು.
ವಿಲಾಸ ಬದಾಮಿ ಸ್ವಾಗತಿಸಿದರು, ಎಸ್. ವಾಯ್. ಕುಂದರಗಿ ಕಾರಾಗಾರದ ಕುರಿತು ವಿವರಿಸಿದರು. ಡಾ. ವೆಂಕಟೇಶ, ದೀಪಾ, ಡಾ. ಮಂಜುನಾಥ, ಪ್ರೊ. ನಯನಾ, ಡಾ. ಸಂಜೀವ ಸಂಗಮಿ ಅತಿಥಿಗಳನ್ನು ಪರಿಚಯಿಸಿದರು.
ಮುಖ್ಯ ಇಂಜನೀಯರ ನೀರಾವರಿ ಇಲಾಖೆ ಅಭಿಯಂತರರಾದ ಡಿ. ಆರ್. ರಾಠೋಡ, ಸಂಜೀವಕುಮಾರ ಹುಲಕಾಯಿ, ಸುರೇಶ ಹಾಗೂ ವಿವಿಧ ಇಂಜನೀಯರಿಂಗ್ ಕಾಲೇಜುಗಳ ಪ್ರಾಧ್ಯಾಪಕವರ್ಗ ಹಾಗೂ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಐ.ಇ.ಐ ನ ಹಿರಿಯ ಇಂಜನಿಯರುಗಳು ಉಪಸ್ಥಿತರಿದ್ದರು.
ಡಾ. ಜ್ಯೋತಿ ಪಾಟೀಲ ವಂದನಾರ್ಪಣೆ ಮಾಡಿದರು. ಡಾ. ಮಂಜುನಾಥ ಹಾಗೂ ತಂಡದವರು ಕಾರ್ಯಕ್ರಮವನ್ನು ನಿರ್ವಹಿಸಿದರು.



