Belagavi NewsBelgaum NewsKannada NewsKarnataka News

*ಶನಿವಾರ ಬೆಳಗಾವಿಯಲ್ಲಿ ನೀರು ಸರಬರಾಜು ಸ್ಥಗಿತ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ದಿನಾಂಕ :31-01-2026 ರಡಿಯಲ್ಲಿ ಪ್ರಕಟಿಸಿದಂತೆ ಮಲಪ್ರಭಾ ಜಲಾಶಯದ ಎಲ್ಲ ಕಾಲುವೆ ಮೂಲಕ ಕೃಷಿಗೆ ಹರಿಸಲಾಗುತ್ತಿರುವ ನೀರನ್ನು ಫೆಬ್ರವರಿ 15 2026 ರಂದು ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಲಾಗಿತ್ತು. 

ಪ್ರಸಕ್ತ ದಿನಾಂಕ 17-02-2026 ರಂದು ಜಲಾಶಯದ ನೀರಿನ ಮಟ್ಟವು 2061.20 ಅಡಿ ಇದ್ದು ಕೇವಲ 14.166 ಟಿ.ಎಂ.ಸಿ ಉಪಯುಕ್ತ ನೀರಿನ ಸಂಗ್ರಹ ವಿರುತ್ತದೆ. ಸದರಿ ಪ್ರಸಕ್ತ ಲಭ್ಯವಿರುವ ನೀರನ್ನು ಮುಂಬರುವ ಜುಲೈ-2026 ರ ಅಂತ್ಯದ ವರೆಗಿನ ಕುಡಿಯುವ ನೀರಿನ ಅವಶ್ಯಕತೆಗಳಿಗೆ ಕಾಯ್ದಿರಿಸಬೇಕಾಗಿರುತ್ತದೆ.

ಆದರೆ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ಶಾಸಕರ ವಿನಂತಿ ಹಾಗೂ ಮಹಾಮಂಡಳದ ಅಧ್ಯಕ್ಷರೊಂದಿಗೆ ಚರ್ಚಿಸಿದಂತೆ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತ ಬಾಂಧವರ ಹಿತದೃಷ್ಟಿಯಿಂದ ಮಲಪ್ರಭಾ ಜಲಾಶಯದ ಎಲ್ಲ ಕಾಲುವೆ ಮೂಲಕ ಕೃಷಿಗೆ ಹರಿಸಲಾಗುತ್ತಿರುವ ನೀರನ್ನು ದಿನಾಂಕ:21-02-2026 ರವರೆಗೆ ಮಾತ್ರ ಮುಂದುವರೆಸಿ ಸ್ಥಗಿತಗೊಳಿಸಲಾಗುತ್ತಿದೆ.

ರೈತರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಮಲಪ್ರಭಾ ಯೋಜನಾ ನೀರಾವರಿ ಸಲಹಾ ಸಮಿತಿ ಕಾರ್ಯದರ್ಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Home add -Advt

Related Articles

Back to top button