Kannada NewsLatestNational

*ಏರ್ ಆಂಬ್ಯುಲೆನ್ಸ್ ಪತನ: ಏಳು ಜನ ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಏರ್ ಅಂಬ್ಯುಲೆನ್ಸ್​ ಟೇಕ್ ಆಫ್ ಆದ ಸ್ವಲ್ಪ ಸಮಯದಲ್ಲೆ ಅಪಘಾತಕ್ಕೀಡಾಗಿದ್ದು,  7 ಜನ ಸಾವನ್ನಪ್ಪಿರುವ ಘಟನೆ ನಡೆದಿದೆ.

ಜಾರ್ಖಂಡ್​ನ ಛತ್ರ ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದೆ. ಏರ್ ಆಂಬ್ಯುಲೆನ್ಸ್ ರೆಡ್‌ಬರ್ಡ್ ಏರ್‌ವೇಸ್ ಪ್ರೈವೇಟ್ ಲಿಮಿಟೆಡ್ ನಿರ್ವಹಿಸುತ್ತಿದ್ದ ವಿಮಾನ ಪತನವಾಗಿದ್ದು, ಅದು ರಾಂಚಿ ವಿಮಾನ ನಿಲ್ದಾಣದಿಂದ ದೆಹಲಿಗೆ ಹೋಗುತ್ತಿತ್ತು. 

ಲತೇಹಾರ್ ಜಿಲ್ಲೆಯ ಚಂದ್ವಾ ನಿವಾಸಿ ಸಂಜಯ್ ಕುಮಾರ್ (41) ಎಂಬ ರೋಗಿಯನ್ನು ಫೆಬ್ರವರಿ 16 ರಂದು ಆಸ್ಪತ್ರೆಗೆ ಕರೆತರಲಾಗಿತ್ತು, ಅವರ ದೇಹ ಶೇ.65ರಷ್ಟು ಸುಟ್ಟಿತ್ತು. ಮುಂದುವರಿದ ಚಿಕಿತ್ಸೆಗಾಗಿ ರೋಗಿಯನ್ನು ದೆಹಲಿಗೆ ಕರೆದೊಯ್ಯಲು ಏರ್ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು. 

ಆದರೆ ಏರ್ ಆಂಬ್ಯುಲೆನ್ಸ್‌ನಲ್ಲಿದ್ದ ಏಳು ಮಂದಿಯೂ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅಪಘಾತಕ್ಕೆ ಗುಡುಗು ಸಹಿತ ಮಳೆ ಕಾರಣವಾಗಿರಬಹುದು ಎಂದು ಹೇಳಿದ್ದಾರೆ.

ಮೃತರನ್ನು ಕ್ಯಾಪ್ಟನ್ ವಿವೇಕ್ ವಿಕಾಸ್ ಭಗತ್, ಕ್ಯಾಪ್ಟನ್ ಸವ್ರಜ್‌ದೀಪ್ ಸಿಂಗ್, ಸಂಜಯ್ ಕುಮಾರ್, ವಿಕಾಸ್ ಕುಮಾರ್ ಗುಪ್ತಾ, ಸಚಿನ್ ಕುಮಾರ್ ಮಿಶ್ರಾ, ಅರ್ಚನಾ ದೇವಿ ಮತ್ತು ಧುರು ಕುಮಾರ್ ಎಂದು ಹೆಸರಿಸಲಾಗಿದೆ‌. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button