CrimeKannada NewsLatestNational

*ಚೆನ್ನಾಗಿ ಓದಿ ಡಾಕ್ಟರ್ ಆಗು ಎಂದಿದ್ದಕ್ಕೆ ತಂದೆಯನ್ನೇ ಗುಂಡಿಟ್ಟು ಕೊಂದ ಮಗ*

ಪ್ರಗತಿವಾಹಿನಿ ಸುದ್ದಿ: ತಂದೆ-ತಾಯಿ ತಮ್ಮಿಂದ ಸಾಧಿಸಲು ಸಾಧ್ಯವಾಗದ್ದನ್ನು ತಮ್ಮ ಮಕ್ಕಳಾದರೂ ಸಾಧಿಸಲಿ ಎಂಬ ಮಹದಾಸೆ ಇಟ್ಟುಕೊಂಡಿರುತ್ತಾರೆ. ಅದೇ ರೀತಿ ಇಲ್ಲೋರ್ವ ತಂದೆ ತನ್ನ ಮಗನಿಗೆ ಚೆನ್ನಾಗಿ ಓದಿ ಡಾಕ್ಟರ್ ಆಗು ಎಂದು ಪದೇ ಪದೇ ಒತ್ತಡ ಹಾಕಿದ್ದೇ ತಪ್ಪಾಗಿ ಹೋಗಿದೆ. ನೀಟ್ ಪರೀಕ್ಷೆಗಾಗಿ ತಂದೆ ಒತ್ತಡಕ್ಕೆ ಬೇಸತ್ತ ಮಗ ತಂದೆಯನ್ನು ಗುಂಡಿಟ್ಟು ಕೊಂದಿರುವ ಘಟನೆ ನಡೆದಿದೆ.

ತಂದೆಯನ್ನು ಗುಂಡಿಟ್ಟು ಕೊಂದು ದೇಹವನ್ನು ತುಂಡರಿಸಿ ಡ್ರಮ್ ನಲ್ಲಿ ತುಂಬಿಟ್ಟಿದ್ದಾನೆ ಕ್ರೂರಿ ಮಗ. ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಔಷಧ ಮತ್ತು ಮದ್ಯದ ವ್ಯವಹಾರ ನಡೆಸುತ್ತಿದ್ದ 49 ವರ್ಷದ ಮನ್ವೇಂದ್ರ ಸಿಂಗ್ ಕೊಲೆಯಾದ ತಂದೆ. ಅಕ್ಷತ್ ಪ್ರತಾಪ್ ಸಿಂಗ್ ತಂದೆಯನ್ನೇ ಕೊಂದ ಮಗ.

ಮನ್ವೇಂದರ್ ಸಿಂಗ್ ಇದ್ದಕ್ಕಿದ್ದಂತೆ ಫೆ.೨೦ರಂದು ನಾಪತ್ತೆಯಾಗಿದ್ದ. ಪತ್ನಿ ಮಗಳು, ಈ ಬಗ್ಗೆ ದೂರು ನೀಡಿದ್ದರು. ಪೊಲೀಸರು ಮನೆಗೆ ಬಂದು ಪರಿಶೀಲಿಸಿದಾಗ ಮನೆಯಲ್ಲಿರುವ ಡ್ರಮ್ ನಲ್ಲಿ ಮನ್ವೇಂದರ್ ಸಿಂಗ್ ಶವ ಪತ್ತೆಯಾಗಿದೆ.

ಮಗ ಅಕ್ಷತ್ ಮೇಲೆ ಅನುಮಾನಗೊಂದ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೊಲೆ ರಹಸ್ಯ ಬಯಲಾಗಿದೆ. ಅಕ್ಷತ್ ತಾನು 12 ನೇ ತರಗತಿಯಲ್ಲಿ ಜೀವಶಾಸ್ತ್ರ ಪದವಿಯೊಂದಿಗೆ ಉತ್ತೀರ್ಣನಾಗಿದ್ದೇನೆ. ನೀಟ್ ಪರೀಕ್ಷೆಗೆ ತಯಾರಿ ನಡೆಸುವಂತೆ ತನ್ನ ತಂದೆಯಿಂದ ಒತ್ತಡ ಇತ್ತು. ಪದೇ ಪದೇ ಬೈಯ್ಯುತ್ತಿದ್ದರು. ಇದರಿಂದ ಮನೆಯಲ್ಲಿ ಜಗಳವಾಗುತ್ತಿತ್ತು.

ಫೆಬ್ರವರಿ 20 ರಂದು ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿ ಬಗ್ಗೆ ತಂದೆ ಮತ್ತು ಮಗನ ನಡುವೆ ಜಗಳ ನಡೆದಿತ್ತು ಕೋಪದ ಭರದಲ್ಲಿ, ಅಕ್ಷತ್ ತನ್ನ ತಂದೆಗೆ ರೈಫಲ್‌ನಿಂದ ಗುಂಡು ಹಾರಿಸಿ ಕೊಂದಿದ್ದ. ನಂತರ ಶವವನ್ನು ಮೂರನೇ ಮಹಡಿಯಿಂದ ನೆಲ ಮಹಡಿಗೆ ಸ್ಥಳಾಂತರಿಸುವ ಮೂಲಕ ಸಾಕ್ಷ್ಯವನ್ನು ನಾಶಮಾಡಲು ಪ್ರಯತ್ನಿಸಿದ್ದ.

ಅಕ್ಷತ್ ತನ್ನ ತಂದೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದ, ಕೆಲವನ್ನು ಸದಾರೋನಾ ಗ್ರಾಮದ ಬಳಿ ಎಸೆದಿದ್ದ ಮತ್ತು ಉಳಿದ ಭಾಗಗಳನ್ನು ಮನೆಯಲ್ಲಿ ಡ್ರಮ್‌ನಲ್ಲಿ ಮರೆಮಾಡಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಆರೋಪಿ ಮಗನನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button